About the Author

ಲೇಖಕ, ಕವಿ ಹಾಗೂ ವೈದ್ಯರಾದ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು (ಶಸ್ತ್ರಚಿಕಿತ್ಸರು ಹಾಗೂ ಮಕ್ಕಳ ತಜ್ಞರು) ಬಾಗಲಕೋಟೆ ಜಿಲ್ಲೆಯ ಬಾದಾಮಿಯವರು.  ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ 40 ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 2016ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ.

ಪ್ರಶಸ್ತಿ-ಗೌರವಗಳು: ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ,  ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ,, ಬೆಸ್ಟ್‌ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ದಿ ಸ್ಟೇಟ್ ಪ್ರಶಸ್ತಿ, 1988ರಲ್ಲಿ ‘ಕ್ಯಾಲಕೊಂಡ ಸಿಸ್ಟಮ್ ಆಫ್ ಸ್ಕೋರಿಂಗ್ ಫಾರ್ ಪ್ರಿಡಿಕ್ಷನ್ ಆಫ್ ಪೊಲಿಯೋಮೈಲೈಟಿಸ್’ ಸಂಶೋಧನಾ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ವೈದ್ಯಕೀಯ ಮಹಾ ಮಂಡಳಿಯ ಪ್ರಶಸ್ತಿ, ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಕೊಡಮಾಡುವ ವೈದ್ಯಶ್ರೀ, ವೈದ್ಯ ಭೂಷಣ ಪ್ರಶಸ್ತಿಗಳು ಸಂದಿವೆ.  ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯವು 2020 ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ.

ಕರವೀರಪ್ರಭು ಕ್ಯಾಲಕೊಂಡ