ಹಿರಿಯ ಸಾಹಿತಿ, ಪ್ರಕಾಶಕರಾಗಿಯೂ ಪರಿಚಿತರಾಗಿದ್ದ ರಾಘವೇಂದ್ರರಾವ್ ಅವರು 1942 ಡಿಸೆಂಬರ್ 20ರಂದು ಮೈಸೂರಿನಲ್ಲಿ ಜನಿಸಿದರು. ತಾಯಿ ಅನಸೂಯಾಬಾಯಿ. ತಂದೆ ಲಕ್ಷ್ಮಣರಾವ್. ಇವರು ರಚಿಸಿದ ಕತೆಗಳು ಮೊದಲು ಪ್ರಕಟವಾಗಿದ್ದ ಜನಪ್ರಗತಿ ಹಾಗೂ ಮಲ್ಲಿಗೆ ಪತ್ರಿಕೆಗಳಲ್ಲಿ. ಮುರಳಿ ಎಂಬ ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಧೃವ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ತೆಲುಗಿನ ಯಂಡಮೂರಿ ವೀರೇಂದ್ರನಾಥ್, ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್, ಸೂರ್ಯದೇವರ ರಾಮಮೋಹನ ರಾವ್, ಮಾಲತಿ ಚೆಂಡೂರ್ ಸೇರಿದಂತೆ ಹಲವಾರು ಲೇಖಕರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ಮೌನ ರಾಗ, ಮೇಡ್ ಫಾರ್ ಈಚ್ ಅದರ್, ಭೂಮಿಗೀತೆ, ಹೈಜಾಕ್ ಸೇರಿದಂತೆ 20 ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಮನ ಮಂಥನ, ಮನಸ್ಸು ಲಹರಿ, ಧ್ಯಾನ ಮನಸ್ಸು ನಿರಾಳ, ಗುಡ್ಡ ಪೇರೆಂಟ್ ಗುಡ್ ಚಿಲ್ಡ್ರನ್, ಚಿಣ್ಣರ ಕುರಿತು ಹಿರಿಯರ ಕಿವಿ ಮಾತು, ತೂಕ ಇಳಿಕೆ, ಆರೋಗ್ಯಗಳಿಕೆ, ನಡಿಗೆ, ವಯಸ್ಸು ಜೀವನ ನಿರ್ವಹಣೆ, ದೇಹಾಲಯ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.