About the Author

ವೈದ್ಯಕೀಯ ಹಾಗೂ ವಿಜ್ಞಾನ ಬರಹಗಾರ್ತಿ ಸುನಂದಾ ರಾ. ಕುಲಕರ್ಣಿ ವೃತ್ತಿಯಲ್ಲಿ ವೈದ್ಯರು. 1948 ಜನವರಿ 28 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಗರ್ಭಿಣಿಯರ ಕೈಪಿಡಿ, ವೈದ್ಯರಲ್ಲಿ ನಗೆಹನಿ, ಮುಟ್ಟಿನ ಅಂತ್ಯ ಹಾಗೂ ಮುಪ್ಪು, ದ್ವಿಲಿಂಗ, ಶಾಲಾ ಮಕ್ಕಳಿಗಾಗಿ ಆರೋಗ್ಯ, ಕಿಶೋರಿಯರಿಗೆ ಕಿವಿಮಾತು, ಮಧ್ಯವಯಸ್ಸಿನ ಮಹಿಳೆಯರ ತೊಂದರೆಗಳು, ಋತುಚಕ್ರದ ಅಂತ್ಯ ಹಾಗೂ ಮುಪ್ಪು, ಗರ್ಭಪಾತಗಳು, ಬಂಜೆತನ, ಕಾಲ, ಬೊನ್ಸಾಯಿ ಬೇಬಿ ಅಥವಾ ತೂಕದ ಶಿಶು, ಕಂಪ್ಯೂಟರ್ ಪ್ರಪಂಚದಲ್ಲಿ, ಗರ್ಭಿಣಿಯಿಂದ ಪ್ರಸೂತಿಯವರೆಗೆ ಹಾಗೂ ಬಾಣಂತಿಯ ಹಾರೈಕೆ’ ಪ್ರಮುಖ ಬರಹಗಳು.

’ಕನ್ನಡ ರತ್ನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಾಕ್ಟರ್ ಡೇ ಪ್ರಶಸ್ತಿ, ಶಂಕರ ಪ್ರತಿಷ್ಠಾನ ಪ್ರಶಸ್ತಿ,  ಸ್ತ್ರೀರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಗಳು ಲಭಿಸಿವೆ. 

ಸುನಂದ ರಾ. ಕುಲಕರ್ಣಿ

(28 Jan 1948)