ಡಾ. ಟಿ.ಎಂ. ಶಿವಲಿಂಗಯ್ಯ ರವರು ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕೊಟ್ಟೂರು ಪಟ್ಟಣದಲ್ಲಿ ಜನಿಸಿದವರು. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ 1954-1958 ರವರೆಗೆ ಎಲ್.ಎ.ಎಂ.ಎಸ್. ವೈದ್ಯಕೀಯ ಪದವಿಯನ್ನು ಪಡೆದು, ಹೊಳೆಹೊನ್ನೂರು ಮತ್ತು ಶಿವಮೊಗ್ಗ ನಗರದಲ್ಲಿ ಎರಡೂ ಕಡೆ ``ಪ್ರಕಾಶ್ ಕ್ಲಿನಿಕ್’’ 1959 ಮೇನಿಂದ ನಡೆಸುತ್ತಿದ್ದರು. ಜೊತೆಯಲ್ಲಿ ಆಯುರ್ವೇದ ಔಷಧ ತಯಾರಿಕಾ ಘಟಕ ಪ್ರಕಾಶ್ ಫಾರ್ಮಸೂಟಿಕಲ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಔಷಧ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ನಿರತರಾಗಿದ್ದು, ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವು ಉಪಯುಕ್ತ ವೈದ್ಯಕೀಯ ಲೇಖನಗಳನ್ನು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.