‘ತರಕಾರಿಗಳಲ್ಲಡಗಿದೆ ಔಷದ’ ಕಾಡುವ ಕಾಯಿಲೆಗಳಿಗೆ ತರಕಾರಿಯೇ ಮದ್ದು. ಡಾ.ಕೆ.ಪೂರ್ಣಿಮಾ ಕೋಡೂರು ಅವರ ಕೃತಿ. ಔಷಧಿ ತಿನ್ನುವುದೆಂದರೆ ಕೆಲವರಿಗೆ ಇಷ್ಟವಾಗುವುದಿಲ್ಲ. ಅದು ಕಹಿ, ಕಷ್ಟ ಇತ್ಯಾದಿ ಕಾರಣಗಳನ್ನು ಔಷದಿ ಸೇವಿಸಲಾಗದ ಹೆಚ್ಚಿನವರು ಕೊಡುತ್ತಾರೆ. ಇಂತಹವರಿಗೆಂದೇ ಆಯುರ್ವೇದೀಯ ವೈದ್ಯಶಾಸ್ತ್ರ ಪದ್ಧತಿ ಅನೇಕ ಸುಲಭದ ಔಷಧಿಗಳನ್ನು ಸೂಚಿಸುತ್ತದೆ. ಅದರಲ್ಲಿ ನಾವು ದಿನನಿತ್ಯ ತಿನ್ನುವ ತರಕಾರಿ, ಹಣ್ಣು ಹಂಪಲುಗಳು ಕೂಡಾ ಒಂದು. ಅಂದರೆ ಆರೋಗ್ಯ ಕಾಪಾಡಿಕೊಳ್ಳಬೇಕು, ರೋಗಗಳಿಂದ ದೂರವಿರಬೇಕೆಂದರೆ ನಾವು ಹೆಚ್ಚೆಚ್ಚು ತರಕಾರಿ ತಿನ್ನಬೇಕೆಂದು ಆಯುರ್ವೇದ ವೈದ್ಯಶಾಸ್ತ್ರ ಹೇಳುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಯಾಗಿ ಖ್ಯಾತಿ ಗಳಿಸಿರುವ ಡಾ.ಕೆ. ಪೂರ್ಣಿಮಾ ಕೋಡೂರು ಅವರು ತರಕಾರಿಗಳಲ್ಲಡಗಿದೆ ಔಷಧ ಎನ್ನುವ ಎಲ್ಲರಿಗೂ ಅತ್ಯಪಯುಕ್ತವಾಗಬಲ್ಲ ಈ ಪುಸ್ತಕವನ್ನು ಬರೆದಿದ್ದಾರೆ.
©2024 Book Brahma Private Limited.