‘ಸಕ್ಕರೆ ಕಾಯಿಲೆ- ಪ್ರಶ್ನೆ ಉತ್ತರ’ ಕೃತಿಯು ಲೇಖಕ ಡಾ. ಎಸ್.ಪಿ ಯೋಗಣ್ಣ ಅವರ ಸಕ್ಕರೆ ಕಾಯಿಲೆ ಕುರಿತಂತೆ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 40 ಅಧ್ಯಾಯಗಳಿವೆ. ಸಕ್ಕರೆ ಕಾಯಿಲೆಯ ಸಂಕ್ಷಿಪ್ತ ಪರಿಚಯ, ಗ್ಲೂಕೋಸ್ ಚಯಾಪಚಯಕ್ರಿಯೆ, ಪ್ಯಾಂಕ್ರಿಯಾಸ್ ಗ್ರಂಥಿ, ರಚನೆ ಮತ್ತು ಕಾರ್ಯಗಳು, ರಕ್ತ ಗ್ಲೋಕೋಸ್ ಏರಿಕೆ, ರಕ್ತ ಗ್ಲೂಕೋಸ್ ಇಳಿಕೆ, ಸಕ್ಕರೆ ಕಾಯಿಲೆ ಎಂದರೇನು? ಮತ್ತು ವಿಧಗಳು, ಸಕ್ಕರೆ ಕಾಯಿಲೆಯ ತೊಂದರೆಗಳು, ಸಕ್ಕರೆ ಕಾಯಿಲೆಯ ದೃಢೀಕರಣ, ಸಕ್ಕರೆ ಕಾಯಿಲೆಗೆ ಮೂಲ ಕಾರಣಗಳು, ಸ್ತ್ರೀಯರಲ್ಲಿ ಸಕ್ಕರೆ ಕಾಯಿಲೆ, ಸಂತಾನ ನಿರೋಧಕ ವಿಧಾನಗಳು, ಸಕ್ಕರೆ ಕಾಯಿಲೆಯಿಂದ ಉಂಟಾಗುವ ಜಟಿಲತೆಗಳು, ಮೂತ್ರ ವ್ಯವಸ್ಥೆಯ ಜಟಿಲತೆಗಳು, ಹೃದಯ ಮತ್ತು ರಕ್ತನಾಳಗಳ ಜಟಿಲತೆಗಳು, ಚಯಾಪಚಯದ ಜಟಿಲತೆಗಳು, ನರಮಂಡಲದ ಜಟಿಲತೆಗಳು, ಸಕ್ಕರೆ ಕಾಯಿಲೆಯ ಪಾದ (ಡಯಾಬಿಟಿಕ್ ಫುಟ್), ಜೀರ್ಣಾಂಗಗಳ ಜಟಿಲತೆಗಳು, ಲೈಂಗಿಕ ಮತ್ತು ಸಂತಾನೋತ್ಪತ್ತಿಯ ಅವ್ಯವಸ್ಥೆಗಳು, ಚರ್ಮದ ಜಟಿಲತೆಗಳು, ಕಣ್ಣಿನ ಜಟಿಲತೆಗಳು, ರೋಗ ನಿರೋಧಕ ಶಕ್ತಿಯ ಅವ್ಯವಸ್ಥೆಗಳು, ಸೋಂಕುಗಳು, ಉಸಿರಾಂಗದ ಜಟಿಲತೆಗಳು, ಸಕ್ಕರೆ ಕಾಯಿಲೆ, ವಯಸ್ಸಾಗುವಿಕೆ ಮತ್ತು ಜೀವಾವಧಿ, ಸಕ್ಕರೆ ಕಾಯಿಲೆಯ ಜಟಿಲತೆಗಳನ್ನು ತಟೆಗಟ್ಟುವುದು ಹೇಗೆ?, ಸಕ್ಕರೆ ಕಾಯಿಲೆಗೆ ಚಿಕಿತ್ಸಾವಿಧಾನಗಳು, ಸಕ್ಕರೆ ಕಾಯಿಲೆ ಮತ್ತು ಆಹಾರ, ಕೊಬ್ಬು ಮತ್ತು ಸಕ್ಕರೆ ಕಾಯಿಲೆ, ದೇಹದ ತೂಕ ಮತ್ತು ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆ ಮತ್ತು ವ್ಯಾಯಾಮ, ಸಕ್ಕರೆ ಕಾಯಿಲೆ ಮತ್ತು ಧೂಮಪಾನ, ಸಕ್ಕರೆ ಕಾಯಿಲೆ ಮತ್ತು ಮಧ್ಯಪಾನ, ಸಕ್ಕರೆ ಕಾಯಿಲೆ ಮತ್ತು ಮಾನಸಿಕ ಸಂಕಷ್ಟ, ಸಕ್ಕರೆ ಕಾಯಿಲೆ ಮತ್ತು ಯೋಗ, ಔಷಧಗಳ ಚಿಕಿತ್ಸೆ, ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವಿಕೆ, ಸಕ್ಕರೆ ಕಾಯಿಲೆ ಬಗ್ಗೆ ಕೆಲವು ಕಲ್ಪನೆಗಳು, ಸಕ್ಕರೆ ಕಾಯಿಲೆಯನ್ನು ವಾಸಿಮಾಡಬಹುದೇ..?, ಸಕ್ಕರೆ ಕಾಯಿಲೆಯೊಂದಿಗಿನ ಬದುಕು.. ಹೀಗೆ ಅನೇಕ ವಿಚಾರಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.