ಕಣ್ಣು 106 ಪ್ರಶ್ನೆಗಳು

Author : ಎಚ್. ಎಸ್. ಮೋಹನ್

Pages 56

₹ 32.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಕಣ್ಣು ಕುರಿತ ವಿಸ್ತೃತ ಮಾಹಿತಿಯ ಕೃತಿ ‘ಕಣ್ಣು: 106 ಪ್ರಶ್ನೆಗಳು.’ ವೈದ್ಯ ಬರೆಹಗಾರ ಡಾ. ಎಚ್.,ಎಸ್. ಮೋಹನ್ ಅವರು ರಚಿಸಿದ್ದು, ಕಣ್ಣುಗಳ ಸಮಸ್ಯೆಗಳು, ಔಷಧೋಪಚಾರ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ಕುರಿತ ವೈದ್ಯಕೀಯ ಸಲಹೆ ರೂಪದ ಕೃತಿ ಇದು. ದೃಷ್ಟಿದೋಷ ಉಂಟಾಗುವುದು ಹೇಗೆ? ಕಣ್ಣಿನ ಪೊರೆ ಬರಲು ಕಾರಣವೇನು? ಇದಕ್ಕೆ ಏನು ಚಿಕಿತ್ಸೆ? ಸಮೀಪದೃಷ್ಟಿ - ದೂರದೃಷ್ಟಿ ಎಂದರೇನು? ಗ್ಲೊಕೊಮಾ ಎಂದರೇನು? ಇದು ಯಾವಾಗ ಬರುತ್ತದೆ? ಇತ್ಯಾದಿ ಕಣ್ಣಿಗೆ ಸಂಬಂಧಿಸಿದ 106 ಪ್ರಶ್ನೆಗಳಿಗೆ ಉತ್ತರ ನೀಡುವ ಕೃತಿ.

About the Author

ಎಚ್. ಎಸ್. ಮೋಹನ್
(31 August 1955)

ಡಾ.ಎಚ್.ಎಸ್.ಮೋಹನ್ ಅವರು ’ಇರುವುದಿಲ್” ಎಂಬ ವಿಚಿತ್ರ ಕಾವ್ಯನಾಮದಲ್ಲಿ ಆರೋಗ್ಯದ ಕುರಿತಾದ ಕೃತಿ, ಲೇಖನಗಳನ್ನು ಬರೆದವರು. ಹುಟ್ಟಿದ್ದು 31-08-1955ರಂದು ಶಿವಮೊಗ್ಗ ಜಿಲ್ಲೆಯ ಹೊಸಬಾಳೆ ಎಂಬಲ್ಲಿ.  ಎಂ.ಬಿ.ಬಿಎಸ್, ಎಂ.ಎಸ್ (ಆಫ್ರೋ), ಡಿ.ಜೆ.ಎಂ.ಎಸ್ ಪೂರ್ಣಗೊಳಿಸಿರುವ ಮೋಹನ್ ವೃತ್ತಿಯಲ್ಲಿ ಕಣ್ಣಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯದ ಕುರಿತಾದ ಕೃತಿಗಳನ್ನು ಬರೆಯುವ ಮೋಹನ್ ಅವರ ಪ್ರಕಟಿತ ಕೃತಿಗಳು- ಪಂಚೇಂದ್ರಿಯಗಳ ಆರೋಗ್ಯ ರಕ್ಷಣೆ, ಏಡ್ಸ್-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು.  ...

READ MORE

Related Books