ಡಾ. ಪಿ.ಎಸ್. ಶಂಕರ್ ಅವರ ಕೃತಿ-ಹೃದಯ ರೋಗ ತಡೆಗಟ್ಟಿ. ಶಾರೀರಕ ರಚನೆಯಲ್ಲಿ ಪ್ರತಿ ಅಂಗವೂ ಮುಖ್ಯವಾದದ್ದು. ಅದರಲ್ಲೂ ಮಿದುಳು ಹಾಗೂ ಹೃದಯದ ಸ್ಥಾನ ಹಾಗೂ ಮಹತ್ವವವನ್ನು ಯಾರೂ ಅಲ್ಲಗಳಿಯಲಾರರು. ಯಾವುದೇ ಅಂಗದಲ್ಲಿ ಸ್ವಲ್ಪ ನ್ಯೂನತೆ ಕಂಡು ಬಂದರೆ ಅದರ ಚಿಕಿತ್ಸೆಗೆ ಕಾಲಾವಕಾಶ ಇರುತ್ತದೆ. ಆದರೆ, ಹೃದಯದ ಕೆಲಸದಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆಯಾದರೆ ತತ್ ಕ್ಷಣವೇ ಚಿಕಿತ್ಸೆ ಅಗತ್ಯ. ಏಕೆಂದರೆ, ಪ್ರತಿ ಅಂಗಕ್ಕೂ ಹೃದಯವು ಶುದ್ಧ ರಕ್ತವನ್ನುಪೂರೈಸಲೇ ಬೇಕು. ಈ ಅಂಗಕ್ಕೆ ವಿರಾಮ ಎಂಬುದಿಲ್ಲ. ಹೀಗಾಗಿ, ಹೃದಯದ ಆರೋಗ್ಯಕಾರಿ ಕಾರ್ಯಗಳಿಗೆ ಎಂದಿಗೂ ತಡೆಯಾಗದಂತೆ ಎಚ್ಚರವಹಿಸಿದಷ್ಟೂ ಕಡಿಮೆಯೆ! ಈ ಹಿನ್ನೆಲೆಯಲ್ಲಿ ಮಾಹಿತಿ ಹಾಗೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ನೀಡಿರುವ ಕೃತಿ ಇದು.
©2024 Book Brahma Private Limited.