ಶಿವಾಜಿ ಯಾರು?

Author : ಚಂದ್ರಕಾಂತ ಪೋಕಳೆ

Pages 80

₹ 50.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್‌, ಕ್ರೆಸೆಂಟ್ ರಸ್ತೆ, ಶಿವಾನಂದ  ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಮರಾಠಿ ಲೇಖಕ ಗೋವಿಂದ ಪಾನಸೆರೆ ಅವರು ಬರೆದ ಕೃತಿಯನ್ನು ಲೇಖಕ-ಅನುವಾದಕ ಚಂದ್ರಕಾಂತ ಪೋಕಳೆ ಅವರು ‘ಶಿವಾಜಿ ಯಾರು?’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಛತ್ರಪತಿ ಶಿವಾಜಿ ಒಬ್ಬ ಸಾಮಂತ ರಾಜ. ನಮ್ಮ ರಾಜರು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಾಗ ಹೋರಾಟ ನಡೆಸಿದರಾದರೂ, ಅದನ್ನು ಸಂಪೂರ್ಣ ಹಿಮ್ಮೆಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅಸಂಖ್ಯಾತ ರಾಜರು ಈ ದೇಶವನ್ನು ಆಳಿ ಹೋಗಿದ್ದಾರೆ. ಆದರೆ, ಶಿವಾಜಿ ಜಯಂತಿಯನ್ನು, ಶಿವಾಜಿ ಪುಣ್ಯತಿಥಿಯನ್ನು ಆಚರಿಸುತ್ತ, ಆತನ ಶೌರ್ಯ, ಪರಾಕ್ರಮಗಳನ್ನು ಸ್ಮರಿಸುವಂತೆ ಬೇರೆ ರಾಜರನ್ನು ಸ್ಮರಿಸುತ್ತಿಲ್ಲ. ಇದಕ್ಕೇನು ಕಾರಣವಿರಬಹುದು? ಕೆಲವು ರಾಜರನ್ನು ಕೆಲವು ಪ್ರದೇಶಗಳಲ್ಲಿ ಸ್ಮರಿಸಿಕೊಳ್ಳುತ್ತಿರಬಹುದು. ಶಿವಾಜಿಯ ಸ್ಮರಣೆಯನ್ನು ವಿಶಾಲ ಪ್ರದೇಶದಲ್ಲಿ ವಿಜೃಂಭಣೆ, ಉತ್ಸಾಹ, ಉಲ್ಲಾಸಗಳಿಂದ ಆಚರಿಸುತ್ತಿರುವುದಕ್ಕೆ ಏನು ಕಾರಣವಿರಬಹುದು? ಈ ಉತ್ಸಾಹದ ಆಚರಣೆಗಳಲ್ಲಿ ಶಿವಾಜಿಯ ನಿಜವಾದ ಧ್ಯೇಯೋದ್ದೇಶಗಳು, ಆಶಯಗಳು ಸ್ವಲ್ಪಮಟ್ಟಿಗಾದರೂ ವ್ಯಕ್ತವಾಗುತ್ತವೆಯೆ? ಶಿವಾಜಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಂತಿರುವ ಈ ಕೃತಿಯನ್ನು ಹಲವು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ರಚಿಸಲಾಗಿದೆ.

 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Reviews

ಹೊಸತು- ಅಕ್ಟೋಬರ್‌-2005

 

ಶಿವಾಜಿಗಿಂತ 'ಶಿವಸೇನೆ'ಯೇ ವಿಜೃಂಭಿಸುತ್ತಿರುವ ಇಂದಿನ ? ಸಂದರ್ಭದಲ್ಲಿ ಶಿವಾಜಿಯ ವ್ಯಕ್ತಿತ್ವವನ್ನು ವಸ್ತುನಿಷ್ಠವಾಗಿ ಈ ಕೃತಿ ಕಟ್ಟಿಕೊಡುತ್ತದೆ. 'ಹಿಂದೂವಾದಿ' ಯಾಗಿ ಮಾತ್ರ ಶಿವಾಜಿ ಕಾಣದೆ ಉತ್ತಮ ಆಡಳಿತಗಾರನಾಗಿ, ಮಾನವತಾವಾದಿಯಾಗಿ ಇಲ್ಲಿ ಕಂಡುಬರುತ್ತಾನೆ. ಹಿಂದೂ ಮುಸ್ಲಿಂ ರಾಜರ ಸಂಘರ್ಷ ಧಾರ್ಮಿಕ ಕಾರಣದ್ದಲ್ಲ ಎಂಬ ಅಂಶವನ್ನು ಈ ಪುಸ್ತಕ ಪ್ರಸ್ತುತಪಡಿಸುತ್ತದೆ. ಪುಸ್ತಕದ ಅನುಬಂಧವಾಗಿ ಶಿವಾಜಿ ಬರೆದ ಪತ್ರಗಳು, ಉಲ್ಲೇಖಗಳು ಉಪಯುಕ್ತವಾಗಿವೆ. ಶಿವಾಜಿಯನ್ನು ತಿರಸ್ಕರಿಸದೆ, ವೈಭವೀಕರಿಸದೆ ಈ ಪುಸ್ತಕ ಅವನ ವ್ಯಕ್ತಿತ್ವವನ್ನು ಚಿತ್ರಿಸುತ್ತದೆ. ಮರಾಠಿಯಲ್ಲಿ ಹದಿನಾರು ಮುದ್ರಣವನ್ನು ಕಂಡಿರುವ ಈ ಕೃತಿಯನ್ನು ಚಂದ್ರಕಾಂತ ಪೋಕಳೆ ಸಮರ್ಥವಾಗಿ ಅನುವಾದಿಸಿದ್ದಾರೆ. 'ಶಿವಾಜಿ ಯಾರು ?' ಎಂಬ ಪುಸ್ತಕದ ಹೆಸರು ಸ್ವಲ್ಪ ವಿಚಿತ್ರವಾಗಿದೆ. ಆತನ ಸರ್ವಾ೦ಗೀಣ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡುವ ಮತ್ತು ಇತಿಹಾಸದ ಸತ್ಯವನ್ನು ಶೋಧಿಸುವ ದೃಷ್ಟಿಯಿಂದ ಈ ಹೆಸರು ಬಂದಿದೆ.

Related Books