ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಸೀತಾರಾಂ ಯೆಚೂರಿ ಅವರು ಭಾರತ ಹಿಂದೂ ರಾಷ್ಟ್ರ ಆಗುವುದರ ಅಪಾಯವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಯೆಚೂರಿ ಅವರ ಬರಹವನ್ನು ಕೆ. ಪ್ರಕಾಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಯೇಚೂರಿ ಅವರ ಅಭಿಪ್ರಾಯದಲ್ಲಿ ’ಹಿಂದೂ ರಾರ್ಷ್ಟದ ಸ್ಥಾಪನೆಯೆಂದರೆ ಧರ್ಮನಿರಪೇಕ್ಷತೆಯ ಮೇಲೆ ನಿಂತ ಸಂಸದೀಯ ಪ್ರಜಾಪ್ರಭುತ್ವದ ಬದಲು ಒಂದು ಅಸಹಿಷ್ಣು ಮತೀಯ ವಿಚಾರಧಾರೆಯನ್ನು ಆಧರಿಸಿದ ಸರ್ವಾಧಿಕಾರವನ್ನು ತರುವುದು ಎಂದೇ ಅರ್ಥ. ಆಧುನಿಕ ಭಾರತವನ್ನು ರಕ್ಷಿಸಬೇಕಾದರೆ ಕೇಸರಿ ಪಡೆಗಳ ಈ ಆಜೆಂಡಾವನ್ನು ವಿಫಲಗೊಳಿಸಬೇಕು. ಉತ್ತಮ ಬದುಕಿಗಾಗಿ, ಭವಿಷ್ಯಕ್ಕಾಗಿ ಭಾರತವನ್ನು ಪರಿವರ್ತಿಸಬೇಕಾದರೆ ಮೊದಲು ಅದನ್ನು ಉಳಿಸಿಕೊಳ್ಳಬೇಕು’.
ಲೇಖಕ ಡಾ. ಪ್ರಕಾಶ್ ಕೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಹಂಪಿ ಕನ್ನಡ ವಿವಿಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಉಗಮ ಮತ್ತು ಬೆಳವಣಿಗೆ ವಿಚಾರದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಅನುವಾದಕರೂ ಹೌದು. ಕೃತಿಗಳು : ಆಧುನಿಕೋತ್ತರವಾದ (ಭಾಷಾಂತರ), ಫಿಡೆಲ್ ಕ್ಯಾಸ್ಟ್ರೋ ( ಭಾಷಾಂತರ), ನಿರುದ್ಯೋಗ: ಒಂದು ಪೆಡಂಭೂತ, ಭಯೋತ್ಪಾದನೆ- ಸಿಐಎ, ಜಿಹಾದಿ, ಹಿಂದುತ್ವ, ಸಮಬಾಳಿನ ಸಂಘರ್ಷ: ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಒಂದು ನೋಟ. ...
READ MORE