ಆಧುನಿಕತೆಯ ಪ್ರಭಾವದಿಂದ ನಮ್ಮ ದೈನಂದಿನ ಬದುಕನ್ನು ಡಿಜಿಟಲ್ ತಂತ್ರಜ್ಞಾನದ ವಿವಿಧ ರೂಪಗಳು ಆವರಿಸಿಕೊಂಡಿದೆ. ನಾವು ಬಳಸುತ್ತಿರುವ ಮೊಬೈಲ್ ಫೋನುಗಳು ಈ ಡಿಜಿಟಲ್ ತಂತ್ರಜ್ಞಾನ ಆಧಾರಿತವಾಗಿದೆ. ದಿನಪತ್ರಿಕೆ, ಪುಸ್ತಕ, ದೂರದರ್ಶನವನ್ನು ನಮ್ಮಲ್ಲಿರುವ ಸ್ಮಾರ್ಟ್ ಫೋನ್ ಮೂಲಕ ತಿರುವಿ ಹಾಕಬಹುದು. ಡಿಜಿಟಲ್ ತಂತ್ರಜ್ಞಾನದ ವಿವಿಧ ಅಂಗಗಳಾದ ಅರೆವಾಹಕ, ಮೈಕ್ರೋಚಿಪ್, ಕಂಪ್ಯೂಟರ್, ದೂರ ಸಂವಹನ, ದ್ಯುತಿ ತಂತು ವಿಜ್ಞಾನ, ಲೇಸರ್ ಮತ್ತು ಅಂತರ್ಜಾಲ ಇವೆಲ್ಲವೂ ಡಿಜಟಲೀಕರಣದ ಪ್ರಕ್ರಿಯೆಗಳಾಗಿವೆ. ಪ್ರಸ್ತುತ ಸರ್ಕಾರಿ ಸೇವೆಗಳೆಲ್ಲ ಡಿಜಿಟೀಕರಣಗೊಂಡಿದ್ದು, ಸರ್ಕಾರಿ ಕಡತಗಳೆಲ್ಲಾ ಡಿಜಿಟಲ್ ಕಡತಗಳಾಗಿ ಪರಿವರ್ತನೆಯಾಗುತ್ತಿವೆ. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದರ ಮಾಹಿತಿಯು ಈ ಕೃತಿಯಲ್ಲಿದೆ.
ಡಾ.ವೈ.ಸಿ. ಕಮಲ ಡಾ. ವೈ.ಸಿ. ಕಮಲ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ತುಮಕೂರಿನ ನಾಗವಲ್ಲಿಯಲ್ಲಿ 1967 ಮಾರ್ಚ್ 1 ರಂದು ಜನಿಸಿದರು. ಇದರ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ-ಒಂದು ವಿಶ್ಲೇಷಣೆ' ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ದೇಶದ ಆಕಾಶವಾಣಿ ಅರ್‍ಕೈವ್ಸ್‌ಗಾಗಿ ಜಾನಪದ ವೃತ್ತಿ ಗಾಯಕರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನೇಕ ರೂಪ ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ...
READ MORE