1875ರಿಂದ 1914ರವರೆಗಿನ ಕಾಲಾವಧಿಯಲ್ಲಿಜ್ಞಾನೋದಯ ಯುಗದ ಬಳಿಕ ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಬಂಡವಾಳ ಶಾಹಿ, ವಸಾಹತು ಆಡಳಿತ, ಮಾರ್ಕ್ಸವಾದ, ಮೊದಲ ಮಹಾಯುದ್ಧ, ಹಲವು ಚಳುವಳಿಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಶಾಂತಿಯಿಂದ ಯುದ್ಧದ ಕಡೆಗೆ ವಾಲಿದ ರಾಷ್ಟ್ರಗಳು, ಕಾರ್ಮಿಕ ಮತ್ತು ಬಂಡವಾಳ ಶಾಹಿಯ ವಿರುದ್ಧದ ಹೋರಾಟ, ಬಂಡವಾಳ ಶಾಹಿ ಮತ್ತು ಸಮಾಜವಾದ, ಬಂಡವಾಳ ಶಾಹಿಯ ಪ್ರಭಾವದಿಂದಾಗಿ ಸಾಮಾಜಿಕ ಕ್ರಾಂತಿಯ ಅನಿವಾರ್ಯತೆ ಇವುಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.