ದಲಿತರ ಪ್ರಸ್ತುತ ಸ್ಥಿತಿಗಳತ್ತ ಕನ್ನಡಿ ಹಿಡಿಯುವ ಕೃತಿ ’ದಲಿತ ಸಮಾಜ- ಇಂದಿನ ಸವಾಲುಗಳು’. ಹಿಂದಿಮೂಲ ಡಾ. ಜಿಯಾಲಾಲ ಆರ್ಯ. ಕನ್ನಡಕ್ಕೆ ಅನುವಾದಿಸಿದವರು ಆರ್.ಪಿ. ಹೆಗಡೆ.
ದಲಿತರ ಸ್ಥಿತಿ ಸುಧಾರಿಸಿದೆ, ಸಂವಿಧಾನದತ್ತ ಸವಲತ್ತುಗಳನ್ನು ಅವರು ಪಡೆದಿದ್ದಾರೆ ಎಂಬ ಮಾತುಗಳು ಕೇಳಬರುತ್ತಿದ್ದರೂ ವಾಸ್ತವದಲ್ಲಿ ಶೋಷಣೆ ಹಾಗೆಯೇ ಉಳಿದಿದೆ. ಉಳಿದ ವರ್ಗದವರು ಶೋಷಿತರನ್ನು ನೋಡುವ ಮನಸ್ಥಿತಿ ಬದಲಾಗಿಲ್ಲ. ಕ್ರೌರ್ಯವೂ ನಿಂತಿಲ್ಲ. ಇಂತಹ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸಲು ಎಲ್ಲ ನಿಟ್ಟಿನಿಂದಲೂ ಕೆಲಸ ನಡೆಯಬೇಕಿದೆ. ಸಮಾಜ ಸ್ಪಂದಿಸಿದಾಗ ಮಾತ್ರ ದಲಿತರ ವಿಮೋಚನೆ ಸಾಧ್ಯ ಎಂದು ಕೃತಿ ಒತ್ತಿ ಹೇಳುತ್ತದೆ.
’ಹಿಂದೂಗಳು ಮಾಡಿದ ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ-ಇವರೆಲ್ಲರಿಗಿಂತ ಹರಿಜನರು ಉನ್ನತರು, ಅರ್ಥಾತ್ ಭಗವಂತನ ಭಕ್ತರು, ಭಕ್ತರಿಗೆ ಯಾವ ಜಾತಿಯೂ ಇರುವುದಿಲ್ಲ. ಅವರೆಂದೂ ಅಸ್ಪಶ್ಯರಾಗುವುದಿಲ್ಲ. `ಹರಿಯನ್ನು ಭಜಿಸಿದವರು ಹರಿಯವರೇ ಆಗುತ್ತಾರೆ. ಯಾರ ಜಾತಿ ಪಂಥಗಳನ್ನು ಕೇಳಬೇಡಿ". ದೇವರು ದಯಾಸಾಗರ ಆಗಬಹುದು, ಆದರೆ ದೇವರ ಭಕ್ತ 'ಹರಿಜನ' ಅಶಕ್ತನೂ ಅಲ್ಲ, ನಿರ್ಬಲನೂ ಅಲ್ಲ. ಅವನು ಹೆಳವನೂ ಅಲ್ಲ, ಕುರುಡನೂ ಅಲ್ಲ. ಆದ್ದರಿಂದ ಅಸ್ಪಶ್ಯರಿಗೆ ಗಾಂಧಿಯವರ ಹರಿಜನ ಶಬ್ದ ಯಾವ ದೃಷ್ಟಿಯಿಂದಲೂ ಉಪಯುಕ್ತ ಅಲ್ಲ’ ಎನ್ನುತ್ತಾರೆ ಕೃತಿಯ ಲೇಖಕ ಡಾ. ಜಿಯಾಲಾಲ ಆರ್ಯ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪದವಿ ಕಾಲೇಜಿನಲ್ಲಿ ಸುದೀರ್ಘ - ಅವಧಿಯವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಆರ್ ಪಿ ಹೆಗಡೆ ಅವರು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಎಂಟು, ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ 25ಕ್ಕೂ ಹೆಚ್ಚು ಕೃತಿಗಳು ಮತ್ತು ಕನ್ನಡದಿಂದ ಹಿಂದಿಗೆ ಅನುವಾದಿಸಿದ ನಾಲ್ಕು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅನೇಕ ಸಣ್ಣ ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನುವಾದ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಹೆಗಡೆಯವರಿಗೆ ಶಿರಸಿಯ ಕವಿ ಕಾವ್ಯ ...
READ MORE