ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ

Author : ವಿಠಲರಾವ್ ಟಿ. ಗಾಯಕ್ವಾಡ್

Pages 160

₹ 160.00




Year of Publication: 2016
Published by: ಯಾಜಿ ಪ್ರಕಾಶನ
Address: ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 7019637741, 94499 22800, 9481042400

Synopsys

‘ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ’ ಮರಾಠಿ ಲೇಖಕ ಶರಣಕುಮಾರ ಲಿಂಬಾವಳಿ ಅವರ ಕೃತಿಯ ಕನ್ನಡಾನುವಾದ. ಮಾಡಿದವರು ವಿಠಲರಾವ್ ಟಿ. ಗಾಯಕ್ವಾಡ್. 

ಇದು ದಲಿತ ಸಾಹಿತ್ಯದ ವಿಮರ್ಶೆ ಎನ್ನಬಹುದು. ದಲಿತ ಲೇಖಕರು ಪಾರಂಪರಿಕ ಸೌಂದರ್ಯ ಶಾಸ್ತ್ರವನ್ನು ನಿರಾಕರಿಸುತ್ತಾರೆ. ಆದರೆ, ತಮ್ಮ ಸಾಹಿತ್ಯಕ್ಕಾಗಿ ಬೇರೆಯದ್ದೇ ಆದ ಸೌಂದರ್ಯಶಾಸ್ತ್ರವಿರಬೇಕು ಎಂಬ ಆವಶ್ಯಕತೆಯನ್ನು ಮಾನ್ಯ ಮಾಡಿದ್ದಾರೆ. ದಲಿತ ಲೇಖಕರಿಗೆ ತಮ್ಮ ಸಾಹಿತ್ಯದ ಸೌಂದರ್ಯ ಮೀಮಾಂಸೆಗಾಗಿ ಬೇರೆಯದ್ದೇ ನಿಕಷಗಳ ಆವಶ್ಯಕತೆಯು ಇದೆ ಎಂಬುದಾಗಿ ದಲಿತ ಲೇಖಕ-ವಿಮರ್ಶಕರ ಪ್ರತಿಪಾದನೆಯಾಗಿದೆ. ಅರ್ಥಾತ್ ನಿಕಷಗಳು ಬದಲಾವಣೆಯಾದಲ್ಲಿ ಸೌಂದರ್ಯವೂ ಬದಲಾವಣೆಯಾಗುತ್ತದೆ. ಜೀವನವಾದಿ, ವಾಸ್ತವವಾದಿ ವಿಮರ್ಶೆಗಳ ನಿಕಷಗಳ ಅನುಸಾರ ದಲಿತ ಸಾಹಿತ್ಯದ ಸೌಂದರ್ಯ ಮೀಮಾಂಸೆಯನ್ನು ಮಾಡಬೇಕಾಗುತ್ತದೆ ಎಂಬ ಧೋರಣೆಯು ಇರುವುದು.

ಲೇಖಕನಿಗೆ ಹೇಗೆ ಹೀಗೆ ಬರೆಯಬೇಕು, ಹಾಗೆ ಬರೆಯಬೇಕು' ಎಂಬುದು ಅಮಾನ್ಯವಾಗಿರುವುದೋ, ಹಾಗೆಯೇ, ವಿಮರ್ಶಕರಿಗೂ 'ಹೀಗೆ ವಿಮರ್ಶೆ ಮಾಡಬೇಕು, ಹಾಗೆ ವಿಮರ್ಶೆ ಮಾಡಬೇಕು' ಎಂಬುದಾಗಿ ಹೇಳುವುದು ಕೂಡಾ  ತಪ್ಪಾಗುತ್ತದೆ. ಕಲಾಕೃತಿಯು ಒಂದೇ ಆಗಿರುತ್ತದೆ, ಆದರೆ ಅದರ ಮೇಲಿನ ವಿಮರ್ಶೆಗಳು ಮಾತ್ರ ಬೇರೆ ಬೇರೆ ಸ್ವರೂಪದ್ದಾಗಿರುತ್ತವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ. ಈ ಕೃತಿ ದಲಿತ ಸಾಹಿತ್ಯದಲ್ಲಿ ಸೌಂದರ್ಯ ಪ್ರಜ್ಞೆಯ ಕುರಿತ ವಿಮರ್ಶೆಯಾಗಿದೆ.

About the Author

ವಿಠಲರಾವ್ ಟಿ. ಗಾಯಕ್ವಾಡ್
(22 July 1960)

ಡಾ.ವಿಠಲರಾವ್ ಟಿ. ಗಾಯಕ್ವಾಡ್ ಅವರು ಮೂಲತಃ ಬಳ್ಳಾರಿಯವರು. 22-07-1960ರಂದು ಜನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ, ಭಾಷಾಂತರ ಅಧ್ಯಯನ, ಮರಾಠಿ ಮತ್ತು ಇಂಗ್ಲಿಷಿನಿಂದ ಕೃತಿಗಳ ಭಾಷಾಂತರ, ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ) ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಲಜ್ಜಾಗೌರಿ (ಅನುವಾದ), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ, ...

READ MORE

Awards & Recognitions

Related Books