ಆಹಾರವು ಕೇವಲ ಹೊಟ್ಟು ತುಂಬಿಸುವ ವಸ್ತುವಲ್ಲ. ಅದು, ಆತ್ಮ-ಬುದ್ದಿ-ಮನಸ್ಸು-ದೇಹ ಎಲ್ಲವನ್ನೂ ನಿರ್ಮಿಸಿ, ಬೆಳೆಸಿ, ರಕ್ಷಿಸುತ್ತದೆ. ದಾನವೀಯತೆಯಿಂದ ಮಾನವೀಯತೆಗೆ, ಮಾನವೀಯತೆಯಿಂದ ದೈವೀಕತೆಯೆಡೆಗೆ ಮನುಷ್ಯನನ್ನು ಕರೆದೊಯ್ಯುತ್ತದೆ ಎಂಬುದು ಭಾರತೀಯ ಪರಂಪರೆ ನಂಬಿಕೊಂಡು ಬಂದಿದೆ. ಆದರೆ, ಮಾಂಸಹಾರವೇ ಶ್ರೇಷ್ಠ ಎಂಬ ಭಾವನೆ ಬಲವಾಗಿ ಬೇರೂರಿರುವ ಇಂದಿನ ದಿನಮಾನದಲ್ಲಿ ಸಸ್ಯಾಹಾರದ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಗೋಮಾಂಸ ಭಕ್ಷಣೆಯ ತಡೆ ಇಂದು ಕೋಮುವಾದ ಆಧರಿತ ಘರ್ಷಣೆಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ, ದೇಶದ ರಾಜಕೀಯ ವಿಶ್ಲೇಷಕ ಹಾಗೂ ಅಂಕಣ ಬರೆಹಗಾರ ಮುಜಫರ್ ಹುಸೇನ್ ಅವರ ”ಇಸ್ಲಾಂ ಮತ್ತು ಸಸ್ಯಾಹಾರ’ ಕೃತಿಯು ಹೊಸ ಹೊಳವುಗಳನ್ನು ನೀಡುತ್ತದೆ. ಈ ಕೃತಿಯನ್ನು ಶಾರದಾ ಘಾಟೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಭಾರತದ ಖ್ಯಾತ ಅಂಕಣಕಾರ ಮುಜಫರ್ ಹುಸೇನ್ ಹಿಂದಿ, ಮರಾಠಿ, ಗುಜರಾತಿ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಪ್ರಖ್ಯಾತ ಲೇಖಕ ಹಾಗೂ ಚಿಂತಕ. ಭಾರತದ 42 ಪತ್ರಿಕೆಗಳಲ್ಲಿ ಅವರ ಸಾಪ್ತಾಹಿಕ ಅಂಕಣಗಳು ಪ್ರಕಟಗೊಳ್ಳುತ್ತಿವೆ. ಮಧ್ಯ ಪ್ರಾಚ್ಯ, ಪಾಕಿಸ್ತಾನ ಹಾಗೂ ಭಾರತದ ಮುಸ್ಲಿಮರ ಕುರಿತು ಅವರು ಹೆಚ್ಚಾಗಿ ಬರೆಯುತ್ತಾರೆ. ರಾಜಸ್ಥಾನದ ಬಿಜೋಲಿಯನ್‌ನಲ್ಲಿ 27 ಜುಲೈ 1945ರಲ್ಲಿ ಜನಿಸಿದ ಮುಜಫರ್, ಮಧ್ಯಪ್ರದೇಶದಲ್ಲಿ ಕಲಾಪದವಿ ಪೂರ್ಣಗೊಳಿಸಿದರು. ಮುಂಬೈಗೆ ಬಂದು ಕಾನೂನು ಶಿಕ್ಷಣ ಪಡೆದರು. ಪತ್ರಿಕೋದ್ಯಮವನ್ನೂ ಅಧ್ಯಯನ ಮಾಡಿದರು. “ಮುಸ್ಲಿಂ ಮಾನಸ್, ಸಮಾನ ನಾಗರಿಕ ಕಾನೂನ್, ಕಾಶ್ಮೀರ್: ಕಲ್ ಔರ್ ಆಜ್, ಸದ್ದಾಮ್ ಹುಸೇನ್ ಔರ್ ಖಾದಿ ಸಮಸ್ಯಾ, ...
READ MORE