ಲೇಖಕ ಆರ್.ಕೆ. ಕುಲಕರ್ಣಿ ಅವರ ಅನುವಾದಿತ ಕೃತಿ ʻದರ್ಶನ ದೀಪಿಕೆʼ. ಏ.ಈ. ಅಥವಾ ಜಾರ್ಜ್ ವಿಲಿಯಂ ರಸೆಲ್ ಅವರು ಮೂಲ ಕೃತಿಯ ಲೇಖಕ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ರಾಗಂ (ರಾಜಶೇಖರ ಮಠಪತಿ) ಅವರು, “ಭೌತ ಜಗತ್ತಿನ ಆಚೆಯೂ ಒಂದು ಬದುಕಿದೆ, ಬೆಳಕಿದೆ ಎಂಬುದನ್ನು ವಿವರಿಸಲು ಯತ್ನಿಸಿದ ಅನೇಕ ಪಾಶ್ಚಾತ್ಯ ಮಹನೀಯರಲ್ಲಿ ಒಬ್ಬ ಏ.ಈ. ಇವನ ಬರಹದ ಗತಿ ಮತ್ತು ಮಿತಿಗಳೆರಡೂ ಈತನ ಸಮಕಾಲೀನ ಸಾಹಿತ್ಯಕ ಮಾನದಂಡಗಳ ವ್ಯಾಪ್ತಿಗೆ ಒಳಪಡಲಿಲ್ಲ. ಈ ಕಾರಣ ಈತ ಭಿನ್ನವಾದ, ಅನ್ಯನಾದ. ಇಡೀ ಯುರೋಪಿಯನ್ ಸಾಹಿತ್ಯ, ಲೌಕಿಕ ಸಂವೇದನೆಗಳ ಸಂಭ್ರಮದಲ್ಲಿದ್ದಾಗ ಏ.ಈ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದು ಆತ್ಮಶೋಧದ, ದರ್ಶನದ ದಾರಿಯಲ್ಲಿ. ಆದರೆ, ಈ ದಾರಿ ಲೋಕಸಹಜವಾಗಿರಲಿಲ್ಲ, ಅಲ್ಲಿಯ ಲೇಖಕರ ಹಸಿವಾಗಿರಲಿಲ್ಲ. ಆದರೆ ಶೋಧಕ್ಕೆ ಸೀಮೆಗಳಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಏ.ಈ.ಯನ್ನು ದಕ್ಕಿಸಿಕೊಂಡವರು ಪೂರ್ವ ಜಗತ್ತಿನ ಜಿಜ್ಞಾಸುಗಳು, ಅವರಲ್ಲಿ ಪ್ರಮುಖರು ಧಾರವಾಡ ಮತ್ತು ಹಲಸಂಗಿ ಗೆಳೆಯರ ಬಳಗದ ಬರಹಗಾರರು. ಪಶ್ಚಿಮದ ಏ.ಈ. ಪೌರ್ವಾತ್ಯ ನಾಡಿನ ಆತ್ಯಶೋಧಕರ ಪಾಲಿಗೆ ಕರುಣಾಳು ಬೆಳಕಾಗಿ ದಕ್ಕಿದ ಪರಿಯನ್ನು ವಿವರಿಸುವುದೇ ಡಾ. ಆರ್. ಕೆ. ಕುಲಕರ್ಣಿಯವರ ಪ್ರಸ್ತುತ ಕೃತಿ 'ದರ್ಶನ ದೀಪಿಕೆ'ಯ ಉದ್ದೇಶ. ಈ ಅರ್ಥದಲ್ಲಿ ಇದು 'ಸಮುದ್ರದ ನೀರು, ಬೆಟ್ಟದ ನೆಲ್ಲಿಕಾಯಿ'ಗಳ ಮಧ್ಯದ ಸಾಮರಸ್ಯಕ್ಕೊಂದು ಸಾಕ್ಷಿ” ಎಂದು ಹೇಳಿದ್ದಾರೆ.
ರಂಗನಾಥ ಕೃಷ್ಣಾಜಿ ಕುಲಕರ್ಣಿ ಅವರು ಮೂಲತಃ ಮನಗೂಳಿ ಗ್ರಾಮದವರು. ವಿಜಯಪುರದಲ್ಲಿ ಆಂಗ್ಲಭಾಷೆಯಲ್ಲಿ ಬಿ.ಎ. ಪದವಿ, ಕ.ವಿ.ವಿ. ಧಾರವಾಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ಧಾರೆ. ಬಳಿಕ ಇಂಗ್ಲೀಷ್ ನಾಟಕಕಾರ, ಕಾದಂಬರಿಕಾರ ಮತ್ತು ಚಿಂತಕ ಜೆ.ಬಿ. ಪ್ರೀಸ್ಟ್ಲಿಯ ಸಾಹಿತ್ಯ ಕೃತಿಗಳ ಕುರಿತ ಅಧ್ಯಯನದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ಆರ್.ಕೆ. ಕುಲಕರ್ಣಿ ಅವರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, 1967 ರಿಂದ 1999 ರವರೆಗೆ ವಿಜಯಪುರದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಕಾಲೇಜುಗಳಲ್ಲಿ ಆಂಗ್ಲಭಾಷೆಯ ಉಪನ್ಯಾಸಕ, ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಬಳಿಕ ಎಸ್.ಬಿ.ಆರ್ಟ್ಸ್ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದ ...
READ MORE