‘ಪುರುಷ ಅಹಂಕಾರಕ್ಕೆ ಸವಾಲ್'’ ತಾರಾ ಬಾಯಿ ಶಿಂಧೆ ಅವರ ಮರಾಠಿ ಕೃತಿಯ ಕನ್ನಡಾನುವಾದ. ಬಿ. ಸುಜ್ಞಾನಮೂರ್ತಿ ಕನ್ನಡೀಕರಿಸಿದ್ದಾರೆ. ತಾರಾಬಾಯಿ ಶಿಂಧೆ 1882ರಲ್ಲಿ ಬರೆದ ‘ಸ್ತ್ರೀಪುರುಷ ತುಲನಾ’ ಪುಸ್ತಕದ ಕನ್ನಡ ಅನುವಾದವಿದು. ಪ್ರತಿಯೊಂದು ಸಾಮಾಜಿಕ ದುರಾಚಾರಕ್ಕೆ ಬಗೆಬಗೆಯ ದುರವಸ್ಥೆಗಳಿಗೆ ಭಾರತದಲ್ಲಿ ಮಹಿಳೆಯರನ್ನೇ ಯಾವಾಗಲೂ ಕಾರಣೀಭೂತರನ್ನಾಗಿ ಮಾಡುವುದನ್ನು ನೋಡಿದ ತಾರಾಬಾಯಿ ಆವೇಶದಿಂದ ಕೆರಳಿದರು. ಪ್ರತಿಕೂಲವಾದ ಪುರುಷ ಓದುಗ ಪ್ರಪಂಚವನ್ನು ತಾನು ಒಬ್ಬಂಟಿಯಾಗಿ ಎದುರಿಸುತ್ತಿದ್ದೇನೆಂಬ ಭಾವನೆಯಿಂದಲೇ ಆಕೆ ನಿಜವಾದ ದೋಷಿಗಳಾದ ಪುರುಷರನ್ನು ಕಠಿಣವಾಗಿ ಟೀಕಿಸಲು ಆರಂಭಿಸಿದರು. ಸರ್ವ ಸ್ವತಂತ್ರ್ಯ, ಹಕ್ಕುಗಳನ್ನು ಪುರುಷರು ತಮ್ಮ ಕೈಯಲ್ಲಿಟ್ಟುಕೊಂಡು ಸಮಾಜದ ಎಲ್ಲ ದುರಾಚಾರಗಳಿಗೆ ಮಹಿಳೆಯರನ್ನು ಹೊಣೆಗಾರರನ್ನಾಗಿ ಮಾಡಿದರು. ಒಬ್ಬ ಮಹಿಳೆ ಇಷ್ಟು ಧೈರ್ಯವಾಗಿ, ತಾರ್ಕಿಕವಾಗಿ ಪುರುಷರೊಂದಿಗೆ ಮಹಿಳೆಯರ ಸಂಬಂಧಗಳ ಬಗ್ಗೆ ಚರ್ಚಿಸುವ ಆಧುನಿಕ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಚಿಂತನೆಯ ಪುಸ್ತಕ ಇದು.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...
READ MORE