ಲೇಖಕ ಆರ್.ವಿ. ಕಟ್ಟೀಮನಿ ತಡಕಲ್ ಅವರು ವಿಲ್ ಡ್ಯೂರಾಂಟ್ ಹಾಗೂ ಪತ್ನಿ ಏರಿಯೆಲ್ ಡ್ಯೂರಾಂಟ್ ಅವರು ಬರೆದ ಲೆಸನ್ಸ್ ಫ್ರಾಮ್ ಇಸ್ಟರಿ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇ-ಇತಿಹಾಸ ಕಲಿಸುವ ಪಾಠ. ಇದು ಸಂಗ್ರಹಾನುವಾದ. 'ಸ್ಟೋರಿ ಆಫ್ ಸಿವಿಲೈಜೇಶನ್' ಹತ್ತು ಸಂಪುಟಗಳಲ್ಲಿ ಪ್ರಕಟವಾದ ಬೃಹತ್ ಗ್ರಂಥ.
ಡ್ಯುರಾಂಟ್ ದಂಪತಿ 'ಲೆಸನ್ಸ್ ಆಫ್ ಹಿಸ್ಟರಿ' ಎಂಬ ಕೃತಿಯಲ್ಲಿ, ಇತಿಹಾಸ-ಸಂಸ್ಕೃತಿ, ಇತಿಹಾಸ-ರಾಜಕೀಯ, ಇತಿಹಾಸ ಭೂಗೋಳ, ಇತಿಹಾಸ-ಸಮಾಜ ಹೀಗೆ ಇತಿಹಾಸದ ಬೆಳಕಲ್ಲಿ ವಿವಿಧ ಕ್ಷೇತ್ರಗಳನ್ನಿಟ್ಟು, ವಿಶ್ಲೇಷಿಸಿದ ಪರಿ ಹಾಗೂ ವಿವಿಧ ಕ್ಷೇತ್ರಗಳಿಗೆ ಇತಿಹಾಸ ನೀಡಿದ ಕೊಡುಗೆ ಹಾಗೂ ಇತಿಹಾಸದ ಪ್ರಭಾವ, ಅಭಿವೃದ್ಧಿ ಇತ್ಯಾದಿ ಕುರಿತು ಅಧ್ಯಯನಪೂರ್ಣ ಬರಹಗಳಿದ್ದು, ಲೇಖಕರು ಮೂಲಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದಾರೆ.
ಲೇಖಕ ಆರ್.ವಿ. ಕಟ್ಟೀಮನಿ ಅವರು ತೆಲುಗು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಇತಿಹಾಸ ಕಲಿಸುವ ಪಾಠ, ದುಡ್ಡು ಮೈನಸ್ ದುಡ್ಡು, ಮಳೆಗಾಲದ ಒಂದು ಸಂಜೆ, ಪರಿಮಳ (ಅನುವಾದಿತ ಕೃತಿಗಳು), ...
READ MORE