ಮೂಲ ಮರಾಠಿ ಕೃತಿಯಾದ ’ತ್ರಿಜ್ಯ - ಆಲೋಚನೆ ಕುರಿತ ಚಿಂತನೆಗಳು’ ಪುಸ್ತಕದ ಲೇಖಕರು ಗಣೇಶ ದೇವಿ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಚಂದ್ರಕಾಂತ ಪೋಕಳೆ. ಗಣೇಶ್ ದೇವಿ ಅವರು ಮರಾಠಿಯಲ್ಲಿ ಬರೆದಿರುವ ಲೇಖನಗಳನ್ನು ಈ ಕೃತಿಯಲ್ಲಿ ಅನುವಾದಿಸಿರುವ ಲೇಖಕ ಚಂದ್ರಕಾಂತ ಪೋಕಳೆ ಮರಾಠಿಯ ದಲಿತ ಸಾಹಿತ್ಯವನ್ನು ಕನ್ನಡಕ್ಕೆ ತಂದವರು.
ಪ್ರಭುತ್ವ, ಭಾಷೆ, ಜನಪದರು, ಸ್ತ್ರೀತ್ವ, ತನ್ನತನ, ಪೂರ್ಣತ್ವದ ತಳಹದಿ ಕುರಿತ ಚಿಂತನೆಗಳನ್ನು ಈ ಕೃತಿ ಒಳಗೊಂಡಿದೆ. ತ್ರಿಜ್ಯವು ಪ್ರಭುತ್ವ ಮತ್ತು ಜನಬದುಕಿನ ಕೊಂಡಿಯಾಗಿರುವ ಮತ್ತು ಆಗಬೇಕಿರುವ ಚಿಂತನಾ ವರ್ಗದ ಸೂಚಿಯೂ ಆಗಿದೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE