ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ ಕೃತಿ- ಹೆಣ್ಣಿನ ಸ್ಥಾನ-ಮಾನ . ಬಂಗಾಲಿಯ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಜೀವನಚರಿತ್ರೆಯಾಗಿದೆ. ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರು ಸ್ತ್ರೀಯರ ಸ್ಥಾನಮಾನವನ್ನು ಕುರಿತು ಬಂಗಾಲಿಯಲ್ಲಿ ರಚಿಸಿದ ಅನುಪಮ ಕೃತಿಯ ಕನ್ನಡ ರೂಪ “ಹೆಣ್ಣಿನ ಸ್ಥಾನ-ಮಾನ'. ಶರತ್ ಚಂದ್ರ ಅವರು ಪ್ರಪಂಚದ ವಿವಿಧ ಭಾಗಗಳಲ್ಲಿ ನೆಲೆಸಿದ ಮಾನವ ಜನಾಂಗಗಳ ಆಚಾರ ವಿಚಾರಗಳನ್ನು ವಿಶ್ಲೇಷಿಸಿ, ಐತಿಹಾಸಿಕ ಮಹತ್ವದ ಈ ವೈಚಾರಿಕ ಪ್ರಬಂಧವನ್ನು ಸಿದ್ದಪಡಿಸಿದ್ದಾರೆ. ಅವರ ಕಥೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ವಿಶ್ಲೇಷಿಸಲು ಈ ಕೃತಿಯು ಮುಖ್ಯ ಆಧಾರಗ್ರಂಥವಾಗಿದೆ. ಸಮಸ್ತ ವಿಶ್ವದ ಮುಖ್ಯವಾಗಿ ಭಾರತೀಯ ಸಮುದಾಯದ, ಬಂಗಾಲದ ಸಂತ್ರಸ್ತ, ದುರದೃಷ್ಟ ಮಹಿಳೆಯರ, ವಿಧವೆಯರ ಸ್ಥಿತಿ-ಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪರೂಪದ ಬರವಣಿಗೆಯಾಗಿದೆ, ಚಿಂತಕರಿಗೆ, ಇತಿಹಾಸಕಾರರಿಗೆ, ಸಮಾಜಶಾಸ್ತ್ರಜ್ಞರಿಗೆ ಶರತ್ ಚಂದ್ರರ ಸಂಪೂರ್ಣ ಸಾಹಿತ್ಯವನ್ನು ವಿಶ್ಲೇಷಿಸುವ ವಿನೂತನ ವಿಧಾನವನ್ನು ತೋರುವ ಕೈಗನ್ನಡಿಯಂತಿದೆ ಈ ಕೃತಿ.
©2024 Book Brahma Private Limited.