ಭಗವದ್ಗೀತೆ V/s ಬೌದ್ಧ ತತ್ವ

Author : ಬಿ.ಆರ್‌. ಅಂಬೇಡ್ಕರ್

Pages 48

₹ 25.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಭಗವದ್ಗೀತೆಯನ್ನೂ ಬುದ್ಧನ ಆಲೋಚನೆಗಳನ್ನೂ ಮುಖಾಮುಖಿಯಾಗಿಸುವ ಯತ್ನವನ್ನು ಬಿ. ಆ‌ರ್‌. ಅಂಬೇಡ್ಕರ್‌ ತಮ್ಮ ಜೀವಿತಾವಧಿಯಲ್ಲಿ ಆಗಾಗ ಮಾಡಿದರು. ಆ ಮೂಲಕ ಸಮಾಜ ಸುಧಾರಣೆ ಮಾಡುವುದು ಅವರ ಕನಸಾಗಿತ್ತು. ಭಗವದ್ಗೀತೆ ಏನು ಹೇಳುತ್ತದೆ, ಬುದ್ಧನ ವಿಚಾರಗಳು ಏನು ಹೇಳುತ್ತವೆ? ಯಾವುದು ಜೀವಪರ ಯಾವುದು ಅಲ್ಲ, ಯಾವುದು ಸಮಾನತೆಗೆ ಪೂರಕ ಎಂಬ ವಿಚಾರಗಳನ್ನು ಕೃತಿ ಚರ್ಚಿಸುತ್ತದೆ. 

ಅಂಬೇಡ್ಕರ್‌ ಕೃತಿಯಲ್ಲಿ ಆಡಿರುವ ಮಾತುಗಳು ಹೀಗಿವೆ: ಭಗವದ್ಗೀತೆ ಬೋಧಿಸುವ ಸಂದೇಶ ಏನು ಎಂಬುವರ ಬಗ್ಗೆ ಇಂತಹ ವೈವಿಧ್ಯಮಯವಾದ ಅಭಿಪ್ರಾಯ ಕಾಣುವುದು ದೊಡ್ಡ ಆಶ್ಚರ್ಯದ ಸಂಗತಿಯಲ್ಲ. ವಿದ್ವಾಂಸರು ದಾರಿ ತಪ್ಪಿದ್ದಾರೆಂಬುದೇ ಇದಕ್ಕೆ ನನ್ನ ಉತ್ತರ. ಖುರಾನ್, ಬೈಬಲ್ ಅಥವಾ ಧಮ್ಮ ಪದದ ಹಾಗೆ ಭಗವದ್ಗೀತೆಯೂ ಕೂಡ ಒಂದು ಸಂದೇಶವನ್ನು ಕೊಡುತ್ತದೆ ಎಂಬ ಭಾವನೆಯಿಂದ ಅವರು ಹೊರಟಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಈ ಭಾವನೆ ಸಂಪೂರ್ಣವಾಗಿ ತಪ್ಪು ಭಾವನೆಯಾಗಿದೆ. ಭಗವದ್ಗೀತೆಯು ದೇವವಾಣಿಯಲ್ಲ. ಆದ್ದರಿಂದ ಅದು ಯಾವ ಸಂದೇಶವನ್ನೂ ಕೊಡಲಾರದು. ಅದನ್ನು ಹುಡುಕುವುದು ವ್ಯರ್ಥ.

About the Author

ಬಿ.ಆರ್‌. ಅಂಬೇಡ್ಕರ್

ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರದು ಬಹುಮುಖಿ ಸಾಮರ್ಥದ ಅಸಾಧಾರಣ ವ್ಯಕ್ತಿತ್ವ. ಬಿ.ಆರ್.ಅಂಬೇಡ್ಕರ್. ಅವರು 1891 ಎಪ್ರಿಲ್ 14 ಇಂದಿನ ಮಾಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಗ್ರಾಮದಲ್ಲಿ ಜನಿಸಿದರು.  ಭಾರತದಲ್ಲಿನ ಜಾತಿ ವ್ಯವಸ್ಥೆಯ ಅವಮಾನದಿಂದ ನೊಂದು ಓದಬೇಕು ಎಂಬ ಹಠ ಅವರನ್ನು ಮುಂದೆ ಸಂವಿಧಾನ ಎಂಬ ಬೃಹತ್‌ ಗ್ರಂಥ ರಚಿಸಲು ಪ್ರೇರಣೆಯಾಯಿತು. ಅವರು ‘ಬ್ರಿಟಿಷ್ ಭಾರತದಲ್ಲಿನ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ’, ‘ರುಪಾಯಿಯ ಬಿಕ್ಕಟ್ಟು’ ಸಂಶೋಧನಾ ಪ್ರಬಂಧಗಳನ್ನು ಕೈಗೊಂಡಿದ್ದರು. ‘ಭಾರತದಲ್ಲಿ ಜಾತಿಪದ್ಧತಿ’, ‘ಬುದ್ಧ ಮತ್ತು ಅವನ ದಮ್ಮ’, ನನ್ನ ವೈಯಕ್ತಿಕ ತತ್ವಜ್ಞಾನ’, ‘ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು’ ಮುಂತಾದ ...

READ MORE

Related Books