ಮಾಕ್ಸ್‌ವಾದಿ ದಾರ್ಶನಿಕ, ರಾಜಕೀಯ ವ್ಯಾಖ್ಯಾನಕಾರ ಐಜಾಜ್ ಅಹ್ಮದ್ ಅವರ ಸಂದರ್ಶನದ ಸಂಗ್ರಹ ‘ಫ್ಯಾಸಿಸಂ, ಹಿಂದುತ್ವ ಮತ್ತು ಭಾರತದ ಪ್ರಜಾಪ್ರಭುತ್ವ’. ಕಳೆದ ಐದು ವರ್ಷಗಳಲ್ಲಿ ಲಿಬರಲ್ ವ್ಯವಸ್ಥೆಯ ಮುಖ್ಯ ವಲಯಗಳಾದ ನ್ಯಾಯಾಂಗ, ಚುನಾವಣಾ ಆಯೋಗ ಮುಂತಾದವುಗಳಿಂದ, ಮತ್ತು ಬಹುತೇಕ ಎಲೆಕ್ಟ್ರಾನಿಕ್ ಮಾಧ್ಯಮಗಳು, ಪ್ರಭಾವೀ ಟಿವಿ ಚಾನಲ್‌ಗಳು, ಇತ್ಯಾದಿಗಳಿಂದಲ್ಲಂತೂ ಎಷ್ಟೊಂದು ದೊಡ್ಡ ಮಟ್ಟದವರೆಗೆ ಆಜ್ಞಾನು ವರ್ತನೆಯನ್ನು ಪಡೆಯಲು ರಾಜಕೀಯ ಪಕ್ಷಗಳು ಹೇಗೆ ಸಶಕ್ತವಾಗಿವೆ ಎಂಬುದರ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ ಐಜಾಜ್ ಅಹ್ಮದ್. ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಲೇಖಕ ಶ್ರೀಪಾದ್ ಭಟ್.
ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...
READ MORE