ಮರಾಠಿ ಲೇಖಕರಾದ ಸುಧಾಕರ ಖಾಂಬೆ ಅವರ ಕೃತಿಯನ್ನು ಕನ್ನಡಕ್ಕೆ ಡಾ. ಸಿದ್ರಾಮ ಕಾರಣಿಕ ಅವರು ’ ಕೋರೆಗಾವ ಕದನ-ದಲಿತ ದಿಗ್ವಿಜಯ’ ಪುಸ್ತಕವನ್ನು ಹೊರತಂದಿದ್ದಾರೆ.
ನಮ್ಮ ದೇಶದ ಇತಿಹಾಸದುದ್ದಕ್ಕೂ ದಮನಿತ ಸಮುದಾಯಗಳು ಆಕ್ರಮಿಸಲು ಬರುವ ಪರರಾಜ್ಯದ ಶತ್ರುವನ್ನು ತಮ್ಮ ಬಿಡುಗಡೆಯ ದಾರಿ ತೋರಿಸಿಯಾನೆಂದು ಭಾವಿಸಿ ಬೆಂಬಲಿರುವ ಎಷ್ಟೋ ಉದಾಹರಣೆಗಳಿವೆ. ಬ್ರಿಟಿಷರ ಕುರಿತು ತಳಸಮುದಾಯಗಳು ಇಂಥ ಭಾವನೆ ಹೊಂದಿದ್ದರೆ ಏನೂ ಆಶ್ಚರ್ಯವಿಲ್ಲ ಎಂದು ಅಂಬೇಡ್ಕರ್ ನೇರ ಮಾತುಗಳಲ್ಲಿ ಹೇಳಿದ್ದರು. ಬರೀ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಸಿಗುವ ಸ್ವಾತಂತ್ರ್ಯದಿಂದ ಈ ದೇಶದ ತಳ ಸಮುದಾಯಗಳಿಗೆ ಯಾವ ಪ್ರಯೋಜನವೂ ಇಲ್ಲ. ಮಲೆತು ನಿಂತ ನೀರಿನಂತಾಗಿರುವ ಸಮಾಜ ವ್ಯವಸ್ಥೆ ಬದಲಾದರೆ ಮಾತ್ರ ದಮನಿತನಿಗೆ ಸ್ವಾತಂತ್ರ್ಯ ಬಂದಂತೆ ಎಂದು ಅವರು ಹೇಳುತ್ತಿದ್ದರು. ಬ್ರಿಟಿಷರು ಈ ದೇಶವಾಸಿಗಳಿಗೆ ದೇಶವೊಪ್ಪಿಸಿ ಹೋಗುವ ಮೊದಲು ತಳಸಮುದಾಯಗಳು ಸಾಧ್ಯವಾದಷ್ಟನ್ನು ಕಾನೂನು ರೀತ್ಯಾ ಪಡೆದುಕೊಳ್ಳಬೇಕೆಂದು ಭಾವಿಸಿ ರಾಜಕೀಯ ಹೋರಾಟಕ್ಕೊಂದು ನೆಲೆ ಒದಗಿಸಿದರು. ಆದರೆ ಅಂಬೇಡ್ಕರರ ರಾಜಕೀಯ ಹೋರಾಟ, ಬ್ರಿಟಿಷರ ಜೊತೆಗೆ ನಡೆಸಿದ ವಾದ-ಚೌ ಕಾತಿಗಳೆಲ್ಲ “ದೇಶಭಕ್ತ'ರಿಂದ ದ್ರೋಹದ ಪಟ್ಟ ಪಡೆದವು. ಇವುಗಳ ಹಿನ್ನೆಲೆಯಲ್ಲಿ ರಚಿತವಾದ ಕೃತಿ ’ ಕೋರೆಗಾವ ಕದನ -ದಲಿತ ದಿಗ್ವಿಜಯ’.
©2024 Book Brahma Private Limited.