ಕವಿ ಎಂ. ಗೋಪಾಲಕೃಷ್ಣ ಅಡಿಗ ಅವರ ಕೃತಿ-ಇತಿಹಾಸ ಚಕ್ರ. ಇದು ಡಾ. ರಾಮ ಮನೋಹರ ಲೋಹಿಯಾ ಅವರು ವ್ಹೀಲ್ ಆಫ್ ಇಸ್ಟರಿ ಆಂಗ್ಲ ಕೃತಿಯ ಕನ್ನಡಾನುವಾದ. ಕೃತಿಯಲ್ಲಿ ಉದ್ದೇಶ ಮತ್ತು ಇತಿಹಾಸ, ಚಕ್ರಗತಿ ದೃಷ್ಟಿ-ಮಿಥ್ಯ ಚಕ್ರಗತಿ ದೃಷ್ಟಿ, ಇತಿಹಾಸದಲ್ಲಿ ಜಡವಾದಿ ವಿವರಣೆ, ವರ್ಗ ಮತ್ತು ಜಾತಿ, ಮನುಷ್ಯ ಲೋಕದ ನಿಕಟ ಗಮನ, ಈಗ ಚಲಾವಣೆಯಲ್ಲಿರುವ ಕನಸುಗಳು, ಆಧುನಿಕ ನಾಗರಿಕತೆಯ ಅರ್ಥ, ಸಮಗ್ರ ಕಾರ್ಯದಕ್ಷತೆ ಹೀಗೆ ವಿದ್ವತ್ ಪೂರ್ಣವಾದ 11 ಅಧ್ಯಾಯಗಳಡಿ ಲೋಹಿಯಾ ಅವರು ತಮ್ಮ ವಿಚಾರಗಳನ್ನು ಮಂಡಿಸಿದ್ದು, ಕವಿ ಅಡಿಗ ಅವರು ಕನ್ನಡೀಕರಿಸಿದ್ದಾರೆ.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE