ಭಾರತೀಯ ದರ್ಶನಗಳು

Author : ಬಿ.ವಿ ಕಕ್ಕಿಲ್ಲಾಯ

Pages 272

₹ 180.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 0802220358001

Synopsys

ದೇವಿಪ್ರಸಾದ ಚಟ್ಟೋಪಾಧ್ಯಯ ಅವರು ಬರೆದ ಆಂಗ್ಲ ಕೃತಿಯನ್ನು ಲೇಖಕ ಬಿ.ವಿ. ಕಕ್ಕಿಲ್ಲಾಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1994 ಲಭಿಸಿದೆ. ಭಾರತೀಯ ಪ್ರಾಚೀನತೆ, ದರ್ಶನಗಳ ಉಗಮ, ಆವರಿಸಿಕೊಂಡ ಬಗೆ ಇತ್ಯಾದಿ ಚಿಂತನೆಗಳ ಮೂಲಕ ಭಾರತೀಯತೆಯ ದರ್ಶನ ಮಾಡಿಸುವ ಅಮೂಲ್ಯ ಕೃತಿ ಇದು.

ಭಾರತೀಯ ದರ್ಶನಗಳಲ್ಲಿಯ ತತ್ವಶಾಸ್ತ್ರದ ಶಾಖೆಗಳನ್ನು ಉಲ್ಲೇಖಿಸಿ, ಚರ್ಚಿಸಿ ಪರಾಮರ್ಶಿಸಲಾಗಿದೆ. ಭಾರತದಲ್ಲೂ ಷಡ್‍ದರ್ಶನಗಳಿವೆ. ವೈದಿಕ ತತ್ವಶಾಸ್ತ್ರದ ಆಧಾರದಿಂದ ಹುಟ್ಟಿಬೆಳೆದು, ಶಾಖೋಪಶಾಖೆಗಳಾಗಿವೆ.ಅವುಗಳನ್ನು ಮಾಕ್ಸ್ ವಾದ ದೃಷ್ಟಿಕೋನದಿಂದ ಪರಾಮರ್ಶಿಸಲಾಗಿದೆ. 

About the Author

ಬಿ.ವಿ ಕಕ್ಕಿಲ್ಲಾಯ
(09 April 1919 - 04 June 2012)

ಬಿ.ವಿ. ಕಕ್ಕಿಲ್ಲಾಯರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರು. ಉತ್ತರ ಕೇರಳದ ಕಾಸರಗೋಡು ತಾಲೂಕಿನ ಚೆರ್ಕಳದ ಸಮೀಪ, ಪಯಸ್ವಿನಿ ನದಿಯ ದಂಡೆಯ ಮೇಲಿರುವ ಬೇವಿಂಜೆಯಲ್ಲಿ ಶ್ರೀಮಂತ ಭೂಮಾಲಕರಾಗಿದ್ದ ವಿಷ್ಣು ಕಕ್ಕಿಲ್ಲಾಯರ ಕೊನೆಯ ಮಗನಾಗಿ ಏಪ್ರಿಲ್ 9, 1919 ರಂದು ಬಿ. ವಿ ಕಕ್ಕಿಲ್ಲಾಯ ಜನಿಸಿದರು.  ಕಾಸರಗೋಡಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಬಳಿಕ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜನ್ನು ಸೇರಿದ ಬಿ ವಿ ಕಕ್ಕಿಲ್ಲಾಯರು ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ಭಾರತದ ಸ್ವಾತಂತ್ರ್ಯ ...

READ MORE

Related Books