ಆನಂದ ಜೋಶಿಯವರ ಮರಾಠಿ ಕೃತಿಯ ಕನ್ನಡಾನುವಾದ ‘ಓದುವುದೆಂದರೆ’. ಈ ಕೃತಿಯನ್ನು ಮೂಲ ಕೃತಿಯಷ್ಟೇ ಸೂಕ್ಷ್ಮವಾಗಿ ಆನಂದ ಝುಂಜರವಾಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. “ಭಾಷೆ ಹಾಗೂ ಶಬ್ದಗಳಿಗೆ ಸಂಬಂಧಪಟ್ಟಂತೆ 3-4 ಮುಖ್ಯ ಕೇಂದ್ರಗಳು ಮೆದುಳಿನಲ್ಲಿ ಇವೆ. ಆದರೆ ಅವುಗಳು ಮಾತ್ರ ಸಾಕಾಗುವದಿಲ್ಲ. ಈ ಭಾಷೆಗೆ ಸಂಬಂಧಪಟ್ಟ ಕೇಂದ್ರವು ಮೆದುಳಿನ ಇನ್ನುಳಿದ ಎಲ್ಲ ಕೇಂದ್ರಗಳೊಂದಿಗೂ ಸಂಪರ್ಕವನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ ಮೆದುಳಿನ ಇನ್ನುಳಿದ ಕೇಂದ್ರಗಳೂ ಈ ಭಾಷೆಯ ಕೇಂದ್ರದೊಂದಿಗೆ ಸಂಪರ್ಕ ಪಡೆದಿರುತ್ತವೆ. ಅಲ್ಲಿನ ಕೊಡು-ಪಡೆಯ ಕ್ರಿಯೆಗಳೂ ಎರಡೂ ಬಗೆಯ ಕೇಂದ್ರಗಳಲ್ಲೂ 'ದ್ವಿತ್ವ' ದಲ್ಲೇ ನಡೆಯುವಂತಹವು.
ಹಸಿರು ಎಂಬ ಬಣ್ಣ ನಮಗೆ ಗೊತ್ತಿದೆ. ನಾವು ಹಸಿರು ಮರಗಳಿರುವ ರಸ್ತೆಯಲ್ಲಿ ನಡೆಯುವಾಗ 'ಹಸಿರುವಾಸನೆ'ಯೂ ಅನುಭವಕ್ಕೆ ಬರುತ್ತದೆ. “ಕಹಿ' ಎಂಬುದು ರುಚಿಯೂ ಅಹುದು. ಕಹಿಯಾದ ವಾಸನೆಯೂ ಇದೆ. ಹಸಿರು, ಕಹಿ, ದಟ್ಟ, ಈ ಶಬ್ದಗಳನ್ನು ನಾವು ಮಾನವೀಯ ಸ್ವ-ಭಾವಗಳನ್ನು ವಿವರಿಸುವಾಗಲೂ ಉಪಯೋಗಿಸುತ್ತೇವೆ. ಇದೆಲ್ಲ ಹೇಗೆ ಸಾಧ್ಯ ಎಂದೂ ಎನ್ನಿಸಬಹುದು” ಇಂಥ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಓದು, ಜ್ಞಾಪಕಶಕ್ತಿಯ ಕುರಿತಾದ ಮಾಹಿಯನ್ನು ಈ ಕೃತಿಯ ಮೂಲಕ ನೀಡಲಾಗಿದೆ.
ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ? ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ. ...
READ MORE