ತಮಿಳುನಾಡು ಮೂಲದ ಎಂ. ಪೆರಿಯಾರ್ ರಾಮಸ್ವಾಮಿ ಆಯ್ಯಂಗಾರ್ ಅವರ ವಿಚಾರಧಾರೆ ಕುರಿತು ತೆಲುಗಿನಲ್ಲಿ ಲೇಖಕ ಕೆ. ವೀರಮಣಿ ಅವರು ಬರೆದ ಕೃತಿಯನ್ನು ಲೇಖಕ ಕೆ. ಮಾಯಿಗೌಡರು ಕನ್ನಡಕ್ಕೆ ಅನುವಾದಿಸಿದ ಕೃತಿ-ಪೆಯಾರ್ ಫಿಲಾಸಫಿ. ಭಾರತದ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಲ್ಲದೇ ಇಂದಿಗೂ ಆ ಪದ್ಧತಿ ಮುಂದುವರಿದುಕೊಂಡು ಬರುವ ಹುನ್ನಾರವನ್ನು ಆ ಕಾಲಕ್ಕೇ ಅವರು ಪ್ರಬಲವಾಗಿ ಖಂಡಿಸುತ್ತಾ ಬಂದವರು. ಭಾರತದಲ್ಲಿ ಜಾತಿ ವ್ಯವಸ್ಥೆ ಹೋಗಬೇಕಾದರೆ ಮೊದಲು ಇಲ್ಲಿಯ ಪುರೋಹಿತಶಾಹಿಯನ್ನು ಹೊಡೆದೋಡಿಸಬೇಕು. ಆಗ ಮಾತ್ರ ಎಲ್ಲ ರೀತಿಯ ಶೋಷಣೆಗಳಿಂದ ಭಾರತ ಮುಕ್ತವಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ ನಾಯಕ ಈತ. ಪೆರಿಯಾರರ ವಿಚಾರಗಳನ್ನು ಒಂದೆಡೆ ಕಟ್ಟಿಕೊಟ್ಟ ಕೃತಿ ಇದು.
©2024 Book Brahma Private Limited.