ಡಾ. ಎನ್ ಗೋಪಾಲಕೃಷ್ಣಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ʼಆರೋಗ್ಯ ಸಂಚಯʼ ಕೃತಿಯು ಆರೋಗ್ಯ ಕುರಿತ ಚಿಂತನೆಗಳ ಪುಸ್ತಕವಾಗಿದೆ. ಡಾ. ವಸುಂಧರಾ ಭೂಪತಿ ಅವರು ಸಂಪಾದಕರು. ಮನುಷ್ಯನ ಜೀವನದಲ್ಲಿ ಆರೋಗ್ಯವೇ ಭಾಗ್ಯ ಎಂಬ ಭಾಗ್ಯ ಪದೇ ಪದೆ ಕೇಳುತ್ತಿರುತ್ತೇವೆ. ಆದರೆ ಆ ಭಾಗ್ಯ ದುಬಾರಿಯಾಗದಿರಲು ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಿದೆ. ಶುಚಿತ್ವ, ಆಹಾರ ಸೇವನೆಯಲ್ಲಿ ನಿಯಮಿತ ಪದ್ಧತಿ, ಗೃಹೋಪಯೋಗಿ ಬಳಕೆಯ ವಸ್ತುಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರ, ಆಹಾರವನ್ನು ನೀಡುವ, ತಯಾರಿಸುವ ಸಂದರ್ಭಗಳಲ್ಲಿ ವಹಿಸಬೇಕಾದ ಸ್ವಚ್ಛತೆಯ ಎಚ್ಚರ, ಶುದ್ಧ ನೀರಿನ ಬಳಕೆ ಹೀಗೆ ಅನುದಿನದ ಬದುಕಿನಲ್ಲಿ ಪ್ರತಿಯೊಬ್ಬರು ಪಾಲಿಸಬೇಕಾದ ಕೆಲವು ಸಾಮಾನ್ಯ ಸಂಗತಿಗಳ ಬಗ್ಗೆ ನಮ್ಮ ಬಹೇತಕ ಜನರಿಗೆ ಅನಾದರವೇ ಹೆಚ್ಚು ಈ ಎಲ್ಲ ಅಂಶಗಳನ್ನು ಮನಗಂಡ ಲೇಖಕರು ಜನಸಾಮಾನ್ಯರಿಗೆ ಆರೋಗ್ಯ ರಕ್ಷಣೆಯ ಕುರಿತು ಸಾಮಾನ್ಯ ತಿಳಿವಳಿಕೆಯನ್ನು ನೀಡುವ ರೀತಿ ಈ ಕೃತಿಯಲ್ಲಿ ವಿವರಿಸಿದೆ ಎಂದು ಅನುವಾದಕರು ಹೇಳಿದ್ದಾರೆ.
©2024 Book Brahma Private Limited.