`ತಿಳಿವು ಗೆಲವು' ವ್ಯಕ್ತಿತ್ವ ವಿಕಸನ ಬರಹಗಳ ಪುಸ್ತಕವಿದು. ಲೇಖಕ ರಾಮಗೋಪಾಲನ್ ರಚಿಸಿದ್ದು, ಲೇಖಕ ಚಿರಂಜೀವಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮ ಗಮನಕ್ಕೆ ಅಷ್ಟಾಗಿ ಬಾರದ, ತೀರ ಸಾಮಾನ್ಯವೆನಿಸುವ ಅಂಶಗಳನ್ನೇ ಎತ್ತಿಕೊಂಡು, ಅವುಗಳಲ್ಲಿ ಅಡಗಿರುವ ಮಹತ್ತ್ವವನ್ನೂ ಅರ್ಥವಿಸ್ತಾರವನ್ನೂ ರಾಮಗೋಪಾಲನ್ ಅವರು, ತಮ್ಮ ಆಳವೂ ವಿಶಾಲವೂ ಆದ ಜೀವನಾನುಭವ, ಮನ ಸೆಳೆಯುವ ಶೈಲಿಯಲ್ಲಿ ಎಳೆಯರಿಗೂ ತಿಳಿಯುವಂಥ ಸರಳ ಮಾತುಗಳಲ್ಲಿ ವಿವರಿಸಿದ್ದಾರೆ. ಕೃತಿಯ ವಿಚಾರಗಳು ಎಷ್ಟು ಉನ್ನತವೋ ಅಷ್ಟೆ ಮುಕ್ತ; ಎಷ್ಟು ಉದಾತ್ತವೋ ಅಷ್ಟೇ ಉಪಯುಕ್ತ ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.