ಸಾಮಾಜಿಕ ನ್ಯಾಯ ಎಂಬುದು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹೇಗಿತ್ತು ಎಂಬುದನ್ನು ಅವಲೋಕಿಸುವ ಕೃತಿ ಇದು. ಹಾಗೆ ಅವಲೋಕಿಸುತ್ತಲೇ ವರ್ತಮಾನದ ಸಂಘರ್ಷಮಯ ವಾತಾವರಣವನ್ನು ಅದು ಒರೆಗೆ ಹಚ್ಚುತ್ತದೆ. ಅಂಬೇಡ್ಕರ್ ದೃಷ್ಟಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಂವಿಧಾನ-ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳು, ಸ್ವಾತಂತ್ರ ಹಕ್ಕುಗಳು, 17 ನೇ ವಿಧಿ, ಹಿಂದೂ ಕೋಡ್ ಬಿಲ್ ಮೊದಲಾದ ಅಧ್ಯಾಯಗಳ ಮೂಲಕ ಸಾಮಾಜಿಕ ನ್ಯಾಯದ ವಿವಿಧ ನೆಲೆಗಳನ್ನು ಚರ್ಚಿಸಲಾಗಿದೆ.
ಜಾತಿಯನ್ನು ಮೀರುವುದು, ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು, ಕೆಳಜಾತಿಗಳ ಜನರಲ್ಲಿ ವಿಶ್ವಾಸ ತುಂಬುವುದು ಅಂಬೇಡ್ಕರ್ ಅವರ ಕನಸಾಗಿತ್ತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ಆಧಾರದ ಮೇಲೆ ಅವರು ಕಟ್ಟಿದ ಸಾಮಾಜಿಕ ನ್ಯಾಯತತ್ವ ದೊಡ್ಡ ಆಲದಮರವಾಗಿ ಬೆಳೆದಿದೆ. ಆದರೂ ಸಮಾನತೆಯಿಲ್ಲದ ಸ್ವಾತಂತ್ಯ್ರ ದೇಶಕ್ಕೆ ಬಂತು. ಅದು ಉಂಟು ಮಾಡಿರುವ ಅನಾಹುತಗಳನ್ನು ಪುಸ್ತಕ ತೆರೆದಿಡುತ್ತದೆ. ಮತ್ತೊಂದೆಡೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದೂ ಸಾಮಾಜಿಕ ನ್ಯಾಯದ ಭಾಗವೇ ಆಗಿತ್ತು ಎಂಬ ವಿಶ್ಲೇಷಣೆ ಇದೆ.
©2024 Book Brahma Private Limited.