ಜೆಎನ್‌ಯುವಿನ ಆಜಾದಿ ಭಾಷಣಗಳು ಈ ಕೃತಿಯಲ್ಲಿವೆ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ವಿದ್ಯಾರ್ಥಿ ವಿಷಯಗಳಲ್ಲಿ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಕಾರ್ಯಕ್ರಮದಲ್ಲಿ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳನ್ನು ಬಂಧಿಸಿದ್ದು ದೇಶವ್ಯಾಪಿ ಪ್ರಚಲಿತವಾಯಿತು. ಈ ಘಟನೆಯಿಂದ ವಿದ್ಯಾರ್ಥಿಗಳೆಲ್ಲರಿಗೂ ಪರಿಚಯವಾದವರು ಕನ್ಹಯ್ಯ ಕುಮಾರ್. ಹಮ್ ಬಿ ಮಾಂಗೆ ಆಜಾದಿ, ಎನ್ನುತ್ತಾ ಆಜಾದಿ ಘೋಷಣೆಗಳನ್ನು ಕೂಗುತ್ತಿದ್ದ ಯುವಕ ಕನ್ಹಯ್ಯ ಅವರು ಘಟನೆ ನಂತರ ದೇಶದ ನಾನಾ ಭಾಗಗಳಲ್ಲಿ ಮಾಡಿದ ಭಾಷಣಗಳ ಪುರ್ಣ ಪಠ್ಯ ಈ ಕೃತಿಯಲ್ಲಿದೆ.
'ತಿನ್ನುವ ಆಹಾರ ಕಸಿದು ಅತ್ತಾಗ ಮರು ಮತ್ತೆ ಏಷಬೆರೆಸಿ ಕೊಟ್ಟು ನಿನ್ನನ್ನು ಸಾಯಿಸಿದಾಗ ಅವರು ದೇಶವನ್ನು ಒಡೆಯುತ್ತಿಲ್ಲ. ಸ್ವತಂತ್ರ ಬಂತು ಅಂತ ಸುದ್ದಿ ಬಂತಷ ಸ್ವರಾಜ್ಯನೂ ಅಂತೇನೋ ಒಂದ್ ಬಂತು ಅಂದ್ರು. ಐವತ್ತರ ವರ್ಷ ಕೆಳಗೆ ಕೆಂಪುಕ್ಕಾಣಿ ಕಂದ ಆಜಾದಿ ಬಂತು ಅಂತನೂ ಅಂದ್ರು ಅದ್ರೆ ಅಣ, ಬಂದಿದ್ದು ಅದೆಲ್ಲಿ ಕಳೆದೋಯ್ತು ? ಗೊತ್ತೇ' ಇದು ಈ ಕೃತಿಯಲ್ಲಿಯ ಭಾಷಣವೊಂದರ ತುಣುಕು.
ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...
READ MORE