ಮರಾಠಿ ಮೂಲದ ಪ್ರಸಿದ್ಧ ಇತಿಹಾಸಕಾರ ವಿ.ಕೆ. ರಾಜವಾಡೆ ಅವರ ಕೃತಿಯನ್ನು ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡೀಕರಿಸಿದ ಕೃತಿ-ಹಿಂದೂ ಧರ್ಮ. ಧರ್ಮವನ್ನು ಧಾರ್ಮಿಕ ನೆಲೆಯಲ್ಲಿ ನೋಡದೇ ಅದರ ವೈಜ್ಞಾನಿಕತೆಯನ್ನು, ಸೃಷ್ಟಿಗೊಂಡ ಅನಿವಾರ್ಯತೆಯನ್ನು ಒಬ್ಬ ಸಮಾಜ ವಿಜ್ಞಾನಿಯಾಗಿ, ಇತಿಹಾಸಕಾರರಾಗಿ ನೋಡಿದ ರಾಜವಾಡೆ ಅವರ ವಿಚಾರಗಳು ಹಿಂದೂ ಧರ್ಮ ಕುರಿತು ಬಹುವಿಸ್ತಾರದ ಹಾಘೂ ಬಹು ಆಳವಾದ ಜ್ಞಾನವನ್ನು ನೀಡುತ್ತವೆ. ಈ ಎಲ್ಲ ಬರಹಗಳು ಸಂಶೋಧನೆಯ ಆಧಾರಗಳನ್ನು ಒಳಗೊಂಡಿವೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE