’ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಹಿಂದೂ ಆಗಿ ಸಾಯಲಾರೆ’ ಎಂಬುದು ಸಂವಿಧಾನ ಶಿಲ್ಪಿ ಡಾ. ಬಿ. ಆರ್ .ಅಂಬೇಡ್ಕರ್ ಅವರ ಘೋಷಣೆಯಾಗಿತ್ತು. ಮುಂದೆ ಇದು ವಿಮೋಚನೆಗಾಗಿ ಹೋರಾಡುವ ದಲಿತರು- ಶೋಷಿತರ ಶಕ್ತಿ ಮಂತ್ರವೂ ಆಯಿತು.
ಈ ಘೋಷಣೆಯನ್ನು ಪ್ರಧಾನವಾಗಿಟ್ಟುಕೊಂಡು ಸದಾಶಿವ ಮರ್ಜಿ ಅವರು, ದಲಿತರು ಮತ್ತು ಶೋಷಿತರ ವರ್ತಮಾನದ ಸವಾಲುಗಳನ್ನು ಚರ್ಚಿಸಿದ್ದಾರೆ. ಘರ್ ವಾಪಸಿಯಂತಹ ಕರೆಯ ಹಿಂದಿರುವ ರಾಜಕಾರಣವನ್ನು ವಿಶ್ಲೇಷಿಸಿದ್ದಾರೆ. ಅಲ್ಲದೆ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಐತಿಹಾಸಿಕ ಹಿನ್ನೆಲೆ ಮತ್ತು ಅವಶ್ಯಕತೆಯನ್ನು ವಿವರಿಸಲಾಗಿದೆ. ಹಿಂದೂ ಧರ್ಮ ಪರಿತ್ಯಜಿಸುವ ಅಂಬೇಡ್ಕರ್ ಅವರ ಚಾರಿತ್ರಿಕ ನಿರ್ಣಯದ ಹಿನ್ನೆಲೆ, ಮುನ್ನೆಲೆಗಳ ಬಗ್ಗೆ ಕೃತಿ ಮಾತನಾಡುತ್ತದೆ. ಬುದ್ಧನೆಡೆಗೆ ಅಂತಿಮ ಪಯಣವೇ ದಲಿತರ ಪಾಲಿಗಿರುವ ವಿಮೋಚನೆಯ ಹಾದಿ ಎಂದು ಕೃತಿ ಆತ್ಯಂತಿಕವಾಗಿ ಸ್ಪಷ್ಟಪಡಿಸುತ್ತದೆ.
©2024 Book Brahma Private Limited.