‘ಮಹತ್ವದ ಮಾರ್ಗಗಳು’ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಅವರ ಕೃತಿಯನ್ನು ಲೇಖಕ ಜಿ.ಕೆ.ಮಧ್ಯಸ್ಥ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು 2015ರಲ್ಲಿ ತಾವು ನಿಧನರಾಗುವ ಕೆಲವೇ ತಿಂಗಳ ಮೊದಲು ಪೂರ್ಣಗೊಳಿಸಿದ್ದ ಅಬ್ದುಲ್ ಕಲಾಂ ಅವರು ಮಹಾನ್ ಮಾರ್ಗದಲ್ಲಿ ಸಾಗುತ್ತಿರುವ ನಮ್ಮ ದೇಶವು ಹೇಗೆ ನಾಯಕನಾಗಿ ಹೊರಹೊಮ್ಮಬಹುದು ಎಂಬುದನ್ನು ಚಿಂತನೆ ನಡೆಸಿದ್ದಾರೆ. ಮಹಾನ್ ನಾಯಕನ ಈ ಮಹತ್ವದ ಮಾರ್ಗಗಳ ಕುರಿತಾದ ಕೃತಿಯನ್ನು ಜಿ.ಕೆ. ಮಧ್ಯಸ್ಥ ಅವರು ಕನ್ನಡಿಗರಿಗಾಗಿ ಅನುವಾದಿಸಿದ್ದಾರೆ.
ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡರಲ್ಲೂ ಸಮಾನ ಆಸಕ್ತಿ ಇರುವ ಗೋಪಾಲ ಕೃಷ್ಣ ಮಧ್ಯಸ್ಥ (ಜಿ.ಕೆ. ಮಧ್ಯಸ್ಥ) ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪತ್ರಿಕೆಗಳ ಭಾಷೆಯ ಬಳಕೆ ಮತ್ತು ಬದಲಾವಣೆಯನ್ನು ವಿಶ್ಲೇಷಣೆ ಮಾಡುತ್ತಾರೆ. ನಿವೃತ್ತಿಯ ನಂತರ ಉಡುಪಿಯಲ್ಲಿ ನೆಲೆಸಿರುವ ಅವರು ‘ದುಡ್ಡು ಕಾಸು', 'ಪದೋನ್ನತಿ' ಎಂಬ ಎರಡು ಅಂಕಣ ಬರಹಗಳನ್ನು ಪುಸ್ತಕಗಳಾಗಿ ಪ್ರಕಟಿಸಿದ್ದಾರೆ. ಗೋಪಾಲಕೃಷ್ಣ ಮಧ್ಯಸ್ಥ ಜನಿಸಿದ್ದು ಕಾಸರಗೋಡು ಸಮೀಪದ ಕುಂಜ್ಯಾರುವಿನಲ್ಲಿ. ...
READ MORE