ಅನುವಾದ ಕಥನ ಲೇಖಕ ಎಚ್.ಟಿ. ಪೋತೆ ಅವರ ಮೂರು ಅನುವಾದ ಕೃತಿಗಳ ಸಂಕಲನ. ದಲಿತರ ಸಾಂಸ್ಕೃತಿಕ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಕಾದಂಬರಿ. ಅಂಬೇಡ್ಕರ್ ಅವರ ಅನುಯಾಯಿ ಬಿ. ಶ್ಯಾಮಸುಂದರ್ ಅವರ ಎರಡು ಕೃತಿಗಳು. ಒಟ್ಟೂ ಮೂರು ಕೃತಿಗಳ ಸಂಕಲನವೇ ಅನುವಾದ ಕಥನವಾಗಿದೆ. ಇಲ್ಲಿಯ ಬರೆಹ ಕೇವಲ ಓದಿ ಮರೆಯುವ ಮನರಂಜನೆಯ ವಿಷಯಗಳಲ್ಲ. ಅಸ್ಪೃಶ್ಯ ಸಮುದಾಯವೊಂದರ ತಲ್ಲಣ, ಆತಂಕಗಳ ವಸ್ತು ಕೇವಲ ಒಂದು ಕುಟುಂಬದ ತನಕ ತಲ್ಲಣಗಳಾಗಿರದೇ ಬಹುಸಂಖ್ಯಾತ ಸಮಾದಾಯಕ್ಕೆ ಅಂಟಿಕೊಂಡು ಬಂದಿರುವ ಯಾತನೆಯ, ಸ್ವಾಭಿಮಾನದ ಕಥನಗಳಾಗಿವೆ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE