ಬಿ.ವಿ. ಸುಬ್ಬರಾಯಪ್ಪ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ನಾಗರಾಜ ವಸ್ತಾರೆ ಅವರು ಕನ್ನಡಕ್ಕೆ ಅನುವಾದಿಸಿದ್ದ ಕೃತಿ-ಆಧುನಿಕ ಭಾರತ-ಐತಿಹಾಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು. ಪಾರಿಭಾಷಿಕ ಪದಗಳ ಮೂಲರೂಪವನ್ನು ಕೊಟ್ಟಿರುವುದರಿಂದ ಪಠ್ಯವನ್ನು ಅರ್ಥೈಸಿಕೊಳ್ಳಲು ಅನುಕೂಲವಾಗಿದೆ. ವಿಜ್ಞಾನರಹಿತ ಧರ್ಮವು ಕುರುಡಾಗಿರುತ್ತದೆ ಎಂಬ ವಿಜ್ಞಾನಿ ಐನ್ ಸ್ಟಿನ್ ಮಾತು ಈ ಕೃತಿಗೆ ಅನ್ವಯಿಸುತ್ತಿದ್ದು, ಮೂಲವಿಜ್ಞಾನವನ್ನು ಎತ್ತಿ ಹಿಡಿದಿದೆ. ಪ್ರಾಚೀನ ಹಾಗೂ ಆಧುನಿಕ ಭಾರತೀಯ ವಿಜ್ಞಾನವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ವಿಜ್ಞಾನ ಹಾಗೂ ಧರ್ಮವು ಪರಸ್ಪರ ಪೂರಕವಾಗಿರಬೇಕು ಎಂಬ ಮಾನವೀಯ ಗುಣವನ್ನು ಬೋಧಿಸುತ್ತದೆ.
©2024 Book Brahma Private Limited.