1987ರಲ್ಲಿ ಅಂಬೇಡ್ಕರರ 'ಹಿಂದೂ ಧರ್ಮದ ಒಗಟುಗಳು' ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ 'ರಾಮ-ಕೃಷ್ಣರ ಒಗಟುಗಳು' ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ ಸಿಗಲೆಂದು ಲೇಖಕ ಎನ್. ಎಸ್. ಶಂಕರ್ ಅವರು 'ರಾಮ-ಕೃಷ್ಣ' ಪುಸ್ತಕವನ್ನು ಅನುವಾದಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಧರ್ಮದ ಬಗೆಗೆ ನಡೆಸಿದ ಆಳವಾದ ಚಿಂತನೆಗಳು ಈ ಕೃತಿಯಲ್ಲಿ ಅಡಕವಾಗಿವೆ. ಹಿಂದೂ ಗೃಹ್ಯಸೂತ್ರಗಳಲ್ಲಿನ ನೀತಿ, ನಿಯಮಗಳು, ಕೃಷ್ಣ ಮತ್ತು ಅವನು ಬೋಧಿಸಿದ ಭಗವದ್ಗೀತೆಯನ್ನು ಕುರಿತ ಅಂಬೇಡ್ಕರರ ಅಭಿಪ್ರಾಯಗಳು, ಮಹಾಭಾರತದ ಕೆಲವು ವಿಷಯಗಳ ವಿಶ್ಲೇಷಣೆ, ಶೂದ್ರರು ಮತ್ತು ಸ್ತ್ರೀಯರ ಪ್ರತಿಕ್ರಾಂತಿ, ಇಷ್ಟೇ ಅಲ್ಲದೆ, ಬುದ್ಧ ಮತ್ತು ಮಾರ್ಕ್ಷ್ ನಡುವಿನ ಹೋಲಿಕೆ, ವೇದಗಳು, ತ್ರಿಮೂರ್ತಿಗಳ ಸತ್ಯಸ್ವರೂಪ, ಮನುವಿನ ವಿಚಾರ, ವರ್ಣಾಶ್ರಮ, ಬ್ರಹ್ಮ, ಕಲಿಯುಗ, ರಾಮ ಕೃಷ್ಣರನ್ನು ಕುರಿತ ಚರ್ಚೆಗಳ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಕನ್ನಡಕ್ಕೆ ಎನ್. ಎಸ್, ಶಂಕರ್ ಅವರು ’ರಾಮ ಕೃಷ್ಣ’ ಕೃತಿಯಲ್ಲಿ ತಂದಿದ್ದಾರೆ.
ಲೇಖಕ, ಪತ್ರಕರ್ತ ಎನ್. ಎಸ್. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...
READ MORE