ಪ್ರೊ. ಬಿಪಿನ್ ಚಂದ್ರ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ-ಆಧುನಿಕ ಭಾರತದ ಇತಿಹಾಸ. ಸ್ವಾತಂತ್ಯ್ರಾ ನಂತರದ ಭಾರತದಲ್ಲಿ ಅಭಿವೃದ್ಧಿ ಕುರಿತಂತೆ ಸಾಕಷ್ಟು ಬದಲಾವಣೆಗಳು ಆಗತೊಡಗಿದವು. ಇದಕ್ಕೆ ಸಮಾನಾಂತರವಾಗಿ ರಾಜಕೀಯ ಬೆಳವಣಿಗೆಗಳು ನಡೆದವು. ಸಾಂಸ್ಕೃತಿಕ-ಸಾಮಾಜಿಕ-ಶೈಕ್ಷಣಿಕ ಹೀಗೆ ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸುವುದು ಮತ್ತೊಂದು ಕಡೆ ರಾಜಕೀಯ ಸ್ಥಿರತೆಯನ್ನು ತಂದು ಕೊಡುವುದು ಹಾಗೂ ನೆರೆ ಹೊರೆಯ ದೇಶಗಳೊಡನೆ ಉತ್ತಮ ಬಾಂಧವ್ಯ ಸಾಧಿಸುವುದು ಇಂತಹ ಸಮಸ್ಯೆಗಳ ಮಧ್ಯೆ ಆಧುನಿಕ ಭಾರತ ಸಿಲುಕಿಕೊಂಡಿತ್ತು. ಈ ಎಲ್ಲ ಸಂಗತಿಗಳ ಜಿಜ್ಞಾಸೆಗಳನ್ನು ಇಲ್ಲಿ ಕ್ರೋಢಿಕರಿಸಲಾಗಿದೆ.
©2024 Book Brahma Private Limited.