‘ಕ್ಯಾಪಿಟಲಿಸಂ ಇಲ್ಲದೆ ಸೋಷಿಯಲಿಸಂ ಇಲ್ಲ’ ಓಶೋ ಅವರ ಕೃತಿಯನ್ನು ಲೇಖಕ ಜಯಪ್ರಕಾಶ ನಾರಾಯಣ ಬಿ.ಎಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಮಾಜವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಕುರಿತಾಗಿ ಚಿಂತಕ, ಧರ್ಮಗುರು ಓಶೋ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಇಲ್ಲಿ ಬಂಡವಾಳಶಾಹಿ ವ್ಯವಸ್ಥೆ ಎದುರು ಮಂಡಿಯೂರುವ ಸಮಾಜವಾದಿ ಚಿಂತನೆಗಳ ಬಗ್ಗೆ ಮತ್ತು ಅವರೆಡರ ವಿವರಣೆಗಳೊಂದಿಗೆ ಭವಿಷ್ಯತ್ತಿನ ಮತ್ತು ವಾಸ್ತವದ ಸ್ಥಿತಿಗತಿಗಳನ್ನು ವಿಶ್ಲೇಷಿಸಲಾಗಿದೆ.
ಪತ್ರಕರ್ತ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್. ಜಾರ್ಜ್ ಅವರ ಎಂ.ಎಸ್., ಯು.ಆರ್. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...
READ MORE