ದಕ್ಷಿಣ ಭಾರತದಲ್ಲಿ ದ್ರಾವಿಡ ಪ್ರಜ್ಞೆ ಮತ್ತು ಚಳುವಳಿಗೆ ಅಸ್ತಿಭಾರ ಹಾಕಿದವರು ಪೆರಿಯಾರ್. ತಮ್ಮ ಪ್ರಖರ ಚಿಂತನೆಗಳಿಗೆ ಹೆಸರಾಗಿದ್ದ ಪೆರಿಯಾರ್ ಅವರ ಬರಹಗಳು ಬೆಂಕಿಯ ಉಂಡೆಯಂತಿರುತ್ತಿದ್ದವು. ಕರ್ಮಠರನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪೆರಿಯಾರ್ ನಾಸ್ತಿಕವಾದದಲ್ಲಿ ನಂಬಿಕೆಯುಳ್ಳವರಾಗಿದ್ದರು. ಪೆರಿಯಾರ್ ಅವರ ವೈಚಾರಿಕ ಬರೆಹದಲ್ಲಿ ಆಯ್ದ ಕೆಲವನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ.