ಭಾರತದ ಬಹುದೊಡ್ಡ ಚಿಂತಕ ಕಂಚ ಐಲಯ್ಯ ಅವರ ’ದಲಿತತತ್ವ’ ಶೋಷಿತರ ಪರವಾದ ಚಿಂತನೆಯ ಮೊತ್ತ.
ದುಡಿಯುವ ವರ್ಗ ಆಹಾರ ಮತ್ತಿತರ ವಸ್ತುಗಳನ್ನು ಉತ್ಪಾದಿಸುತ್ತದೆ, ಸೇವೆಗಳನ್ನು ಒದಗಿಸುತ್ತದೆ. ಆ ಮೂಲಕ ಸಮಾಜದ ಕಟ್ಟುವಿಕೆಗೆ ಶ್ರಮಿಸುತ್ತದೆ. ಇದರ ಅಂಗವಾಗಿ ಅವರೊಳಗೆ ನಡತೆ, ಸಂಸ್ಕೃತಿ, ರೂಢಿ- ಸಂಪ್ರದಾಯಗಳು ಮೊಳೆಯುತ್ತವೆ. ಇದರ ಆಧಾರದ ಮೇಲೆ ಅವರ ಚಾರಿತ್ರಿಕ, ನ್ಯಾಯಿಕ, ರಾಜಕೀಯ ವಿಚಾರಗಳು ರೂಪುಪಡೆದಿವೆ. ಆದರೆ ಈ ಪ್ರಕ್ರಿಯೆಗಳ ವಿರುದ್ಧವಾಗಿ ಕೆಲಸ ಮಾಡುವ ಶಕ್ತಿಗಳೂ ಇವೆ. ಆ ಶಕ್ತಿಗಳನ್ನು ಪ್ರಶ್ನಿಸುತ್ತಲೇ ದಲಿತತತ್ವವನ್ನು ಕಟ್ಟಬೇಕು ಎನ್ನುವ ಒತ್ತಾಸೆ ಕೃತಿಯದ್ದು. ಬೇರೆ ಬೇರೆ ಸಮುದಾಯಗಳ ವಿಭಿನ್ನ ದುಡಿಮೆಗಳ ಚಿತ್ರಣವನ್ನು ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.