20ನೇಯ ಶತಮಾನದ ಭಾರತದಲ್ಲಿ ಬೌದ್ಧಧರ್ಮವನ್ನು ಜೀವಂತ ಧರ್ಮವಾಗಿ ಪುನಶ್ವೇತನಗೊಳಿಸಿದ ಕೀರ್ತಿ ಧರ್ಮಾನಂದ ಕೊಸಾಂಬಿ ಅವರಿಗೆ ಸಲ್ಲುತ್ತದೆ. ಈ ಕಾರ್ಯದಲ್ಲಿ ಅವರು ಧರ್ಮದ ಸಿದ್ದಾಂತವನ್ನು ಮತ್ತು ಆಚರಣೆಗಳನ್ನು ಮತ್ತೆ ಪರಿಚಯಿಸಿದ್ದಲ್ಲದೆ, ಅದರ ಪ್ರಸ್ತುತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಮತ್ತು ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ.
1912ರಿಂದ 1931ರವರೆಗಿನ ಅವರ ಅನುಭವ ಕಥನವನ್ನು 'ಖುಲಾಸಾ' ಶೀರ್ಷಿಕೆಯ ಕೆಳಗೆ ಲೇಖನಗಳ ಸರಣಿಯಾಗಿ ಬೆಳಕು ಕಂಡಿದೆ. ಪ್ರಸ್ತುತ ಕೃತಿಯಲ್ಲಿ ಧರ್ಮಾನಂದರ ಅನುಭವ ಕಥನ ಖುಲಾಸಾದ ಆಯ್ದ ಭಾಗಗಳೊಂದಿಗೆ, ಅವರ ಸಾಮಾಜಿಕ ಹಾಗೂ ರಾಜಕೀಯ ವಿಶ್ಲೇಷಣೆಯ ಲೇಖನಗಳು ಸೇರ್ಪಡೆಯಾಗಿವೆ. ಧರ್ಮಾನಂದರ ಗಾಢ ಅನುಭವ, ಚಿಕಿತ್ಸಕ ಮನೋಭಾವ ಹಾಗೂ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿರುವ ಈ ಲೇಖನಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಈ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE