‘ಡಿ.ಡಿ.ಕೊಸಾಂಬಿ ಅವರ–ಆಯ್ದ ಬರಹಗಳು’ ಕುವೆಂಪು ಭಾಷಾ ಭಾರತಿಯ ವಿಚಾರ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಮಾಲಿಕೆಯ ಪ್ರಧಾನ ಸಂಪಾದಕರು ಡಾ.ಎಂ.ಜಿ.ಹೆಗಡೆ. ಅನುವಾದಕರು ಶ್ರೀಮತಿ ಶೈಲಜ ಮತ್ತು ಟಿ.ಎಸ್.ವೇಣುಗೋಪಾಲ್. ಭಾರತೀಯ ಗಣಿತಜ್ಞ, ಸಂಖ್ಯಾಶಾಸ್ತ್ರಜ್ಞ, ಭಾಷಾಶಾಸ್ತ್ರಜ್ಞ, ಇತಿಹಾಸತಜ್ಞ ಡಿ.ಡಿ. ಕೊಸಾಂಬಿಯವರ ಪ್ರಮುಖ ಲೇಖನಗಳನ್ನು ಕನ್ನಡೀಕರಿಸಲಾಗಿದೆ.
ಡಾ. ಎಂ.ಜಿ ಹೆಗಡೆ ಕುಮಟಾದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಬರಹಗಳು ಇವರ ಆಸಕ್ತಿ ಕ್ಷೇತ್ರವಾಗಿದೆ. ಅಧ್ಯಾಪನ, ಅಧ್ಯಯನ ಜೊತೆಗೆ ಸಂಶೋಧನೆ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಡಾ.ಎಂ.ಜಿ.ಹೆಗಡೆಯವರು ಜಿ.ಎಸ್. ಆಮೂರ ಅವರ ಅಭಿನಂದನ ಗ್ರಂಥ ’ವಿಮರ್ಶಾ ವಿವೇಕ’ದ ಸಂಪಾದಕರು. ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ಸಾಲು ದೀಪಗಳು, ತಲಸ್ಪರ್ಶಿ, ಎಂ. ಹಿರಿಯಣ್ಣ, ಅಂತ್ಯವಿಲ್ಲದ ಹಾದಿ, ಡಿ.ಡಿ ಕೊಸಾಂಬಿ ಅವರ ಆಯ್ದ ಬರಹಗಳು, ಮಹಾಭಾರತ, ಅಮೃತ ಬಿಂದು, ಸಹಯಾನ, ಬೆಳಕಿನ ...
READ MORE