ಮಿಥ್ಯೆಯ ಮಣಿಸುವ ಮಾನವ

Author : ಜಿ. ರಾಮಕೃಷ್ಣ

Pages 212

₹ 160.00




Year of Publication: 2017
Published by: ಮಾ-ಲೆ ಪ್ರಕಾಶನ
Address: ಬೆಂಗಳೂರು-560085

Synopsys

ಲೇಖಕ ಬ್ಯಾರೋಸ್ ಡನ್ ಹ್ಯಾಮ್ ಅವರು ಇಂಗ್ಲಿಷಿನಲ್ಲಿ ಬರೆದ ವೈಚಾರಿಕ ಲೇಖನಗಳನ್ನು ವಿಮರ್ಶಕ ಡಾ. ಜಿ. ರಾಮಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಿಥ್ಯೆಯ ಮಣಿಸುವ ಮಾನವ. ಶತಮಾನಗಳಿಂದ ಸ್ಥಾಪಿತ ಕೆಲ ವಿಚಾರಗಳನ್ನು ಇಲ್ಲಿ ತೀವ್ರ ವಿಶ್ಲೇಷಣೆಗೆ ಒಳಪಡಿಸಿದ್ದು, ಶ್ರೀಮಂತರ ಶೋಷಣೆಗೆ ಈ ವಿಚಾರಗಳು ಹೇಗೆ ಪೂರಕವಾಗಿವೆ ಎಂಬುದನ್ನು ತೋರುವ ಪ್ರಯತ್ನ ಇಲ್ಲಿದೆ. ಇಂತಹ ಸ್ಥಾಪಿತ ಮಾತುಗಳಿಂದ ಜನಸಾಮಾನ್ಯರು ಇದ್ದ ಅಲ್ಪಸ್ವಲ್ಪ ವೈಚಾರಿಕತೆಯನ್ನೂ ನಂಬದಿರುವುದು ಅವರ ಬದುಕಿನ ದುರಂತವನ್ನಾಗಿ ಮಾಡಿದೆ ಎಂಬುದು ಇಲ್ಲಿಯ ಬರಹಗಳ ಪ್ರಮುಖ ವೈಚಾರಿಕ ಕೇಂದ್ರ.

 

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Related Books