ಸಮಾಜವಾದ ಬಂಡವಾಳ ಶಾಹಿಗೆ ಪರ್ಯಾಯವಾಗಿ ಕಮ್ಯುನಿಸಂ ಎನ್ನುವ ಸಂದರ್ಭದಲ್ಲಿ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಅಲ್ಲಗಳೆದು ರೂಪಿತವಾದುದು. ಪಲ್ಲವ ಪ್ರಕಾಶನ ಹೊರತಂದಿರುವ ಲೋಹಿಯಾ ಚಿಂತನ ಮಾಲಿಕೆಯ ಭಾಗವಾಗಿ ನಿರಾಶೆಯ ಕಾಲದ ಕರ್ತವ್ಯಗಳು ಲೋಹಿಯಾ ಚಿಂತನೆಯನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಖ್ಯಾತ ಲೇಖಕ ನಟರಾಜ್ ಹುಳಿಯಾರ್ ಈ ಮಾಲಿಕೆಯನ್ನು ಸಂಪಾದಿಸಿದ್ದಾರೆ. ಈ ಮಾಲಿಕೆಯ ಪುಸ್ತಕಗಳಲ್ಲಿ ಲೋಹಿಯಾ ಅವರ ಬದುಕು ಹಾಗೂ ಚಿಂತನೆಗಳ ಸಂಕ್ಷಿಪ್ತ ಪರಿಚಯ ಹಾಗೂ ಲೋಹಿಯಾ ಅವರ ಬರಹಗಳಿವೆ. ರಾಮಮನೋಹರ ಲೋಹಿಯಾ ನಡೆದು ಬಂದ ದಾರಿ ಮೊದಲ ಅಧ್ಯಾಯವಾದರೆ, ಲೋಹಿಯಾ ಅವರು ಬರೆದ ಲೇಖನ ನಿರಾಶೆಯ ಕಾಲದ ಕರ್ತವ್ಯಗಳು ಎರಡನೆಯ ಅಧ್ಯಾಯವಾಗಿದೆ. ವರ್ತಮಾನದಲ್ಲಿ ಪ್ರಗತಿಪರರ ನಡುವಿನ ಹತಾಶೆ, ನಿರಾಶೆಗಳಿಗೆ ಉತ್ತರವೆಂಬಂತೆ ಈ ಲೇಖನವಿದೆ. ವಿದ್ಯಾರ್ಥಿ ಸಂಘಟನೆ ಹೇಗೆ ಒಂದು ಆಂದೋಲನಕ್ಕೆ ಹಿನ್ನೆಲೆಯಾಗಿ ನಿಲ್ಲಬಹುದು ಎನ್ನುವುದರ ಬಗ್ಗೆಯೂ ಮಾತನಾಡುತ್ತಾರೆ. ಹಲವು ದಶಕಗಳ ಹಿಂದೆ ಬರೆದಿರುವ ಅವರ ನಿರಾಶೆ, ಖಿನ್ನತೆ ಮತ್ತು ಅದರೊಳಗಿಂದಲೇ ಹೊಮ್ಮಿ ಬರುವ ಆಶಾವಾದ ಪ್ರಸ್ತುತ ಉಪಯುಕ್ತವಾಗಿದೆ. ಎಲ್ಲೆಲ್ಲೋ ಮೋದಿಯ ಭಕ್ತರ ಆರ್ಭಟ, ಚೀರಾಟ ಜೋರಾಗಿರುವಾಗ, ಸಜ್ಜನರ ಮೌನವನ್ನೇ ಬಳಸಿಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಎಂದೂ ಭರವಸೆ ಕಳೆದು ಕೊಳ್ಳಬಾರದು ಎನ್ನುವ ಎಚ್ಚರಿಕೆಯನ್ನು ಈ ಕೃತಿ ನಮಗೆ ತಿಳಿಸುತ್ತದೆ.
©2024 Book Brahma Private Limited.