ಮಹಾತ್ಮ ಜ್ಯೋತಿಬಾ ಫುಲೆ ಹಿಂದುಳಿದ ಜಾತಿಗಳ ಅಭಿವೃದ್ಧಿ ಸಬಲೀಕರಣ ಸಂಸ್ಥೆಯ ಸ್ಥಾಪಕರಾದ ಪ್ರೊ. ಕೆ. ಮುರಳಿ ಮನೋಹರ್ ಅವರು ಬರೆದ ಕೃತಿ ’ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ’. ಕನ್ನಡಕ್ಕೆ ಅನುವಾದಿಸಿದವರು ಬಿ. ಸುಜ್ಞಾನ ಮೂರ್ತಿ. ಹೈದರಾಬಾದಿನ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಏರ್ಪಡಿಸಿದ್ದ ವಿಶೇಷ ಉಪನ್ಯಾಸದ ಕನ್ನಡ ಅವತರಣಿಕೆ ಇದು.
ಸಾಮಾಜಿಕ ಸಬಲೀಕರಣಕ್ಕೆ ಅಡ್ಡಗಾಲಾಗಿರುವ ಸಂಗತಿಗಳು ಏನು ಎಂಬುದರ ಚರ್ಚೆಯೂ ಕೃತಿಯಲ್ಲಿದೆ. ಆಂಧ್ರಪ್ರದೇಶದ ಉದಾಹರಣೆಗಳನ್ನು ನೀಡುತ್ತಾ ಲೇಖಕರು ಸಮಾಜದಲ್ಲಿರುವ ಜಾತಿಗಳು, ಸಾಮಾಜಿಕ, ಸಾಂಸ್ಕೃತಿಕ , ಶಿಕ್ಷಣ, ಆರ್ಥಿಕ ವ್ಯವಸ್ಥೆ, ರಾಜಕೀಯ ಅಧಿಕಾರ ವ್ಯವಸ್ಥೆ, ಆಡಳಿತ ನ್ಯಾಯವ್ಯವಸ್ಥೆಯ ರಚನೆ, ಸಮೂಹ ಮಾಧ್ಯಮಗಳ ವ್ಯವಸ್ಥೆಯಿಂದಾಗಿ ಸಬಲೀಕರಣ ಸಾಧ್ಯವಾಗದೇ ಇರುವುದನ್ನು ದಾಖಲಿಸಿದ್ದಾರೆ. ಅಂಕಿ ಅಂಶಗಳೊಡನೆ ಕರಾರುವಕ್ಕಾದ ವಿಶ್ಲೇಷಣೆ ನೀಡಲಾಗಿದೆ. ಅಂಬೇಡ್ಕರ್ ಸಿದ್ಧಾಂತಗಳನ್ನು ಒಪ್ಪಿಕೊಂಡವರು ಅವುಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುತ್ತಿಲ್ಲ ಏಕೆ? ಎಡವಿದ್ದು ಎಲ್ಲಿ ಎಂಬುದನ್ನು ಅವಲೋಕಿಸಲಾಗಿದೆ.
©2024 Book Brahma Private Limited.