ನೋಬೆಲ್ ಪ್ರಶಸ್ತಿ ಪುರಸ್ಕೃತ ಬೋರಿಸ್ ಪಾಸ್ತರ್ ನಾಕ್ ಅವರ ಆಯ್ದ ಬರೆಹಗಳ ಅನುವಾದಿತ ಕೃತಿಯೇ- ಒಂಟಿದನಿ. ಅನುವಾದಕರು ಕೇಶವ ಮಳಗಿ. ರಷ್ಯನ್ ಸಾಹಿತ್ಯದಲ್ಲಿ ಬೋರಿಸ್ ಪಾಸ್ತರ್ ನಾಕ್ ಅವರ ಹೆಸರು ಮಹತ್ವದ್ದು. ಡಾಕ್ಟರ್ ಜಿವಾಗೋ ಕಾದಂಬರಿಯು ಇವರಿಗೆ ನೋಬೆಲ್ ತಂದು ಕೊಟ್ಟ ಕೃತಿ. ಅರಾಜಕತೆ, ಅಪನಂಬಿಕೆ ಮಧ್ಯೆಯೂ ಕ್ರಾಂತಿಗಾಗಿ ದುಡಿದವರ ಬದುಕು, ಸ್ವಾರ್ಥಪರ ಜನರಿಂದ ಮತ್ತೆ ಮೂರಾಬಟ್ಟೆಯಾಗುವಂತಿದ್ದರೆ, ಅಂಥ ಪರಿವರ್ತನೆ ಬೇಕೆ? ಎಂದು ಪ್ರಶ್ನಿಸುತ್ತದೆ. ಇವರ ಬಹುತೇಕ ಬರೆಹಗಳು ಆತ್ಮಶೋಧಕವಾಗಿವೆ.
ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...
READ MORE