ಸಮಾಜದಲ್ಲಿ ಜಾತಿ ಇದೆಯೇ? ನೇರವಾಗಿ ಈ ಪ್ರಶ್ನೆ ಎಸೆದರೆ ಉತ್ತರ ಇಲ್ಲ ಎಂದೇ ಬರುತ್ತದೆ. ಆದರೆ ಕೊಂಚ ಕೆದಕಿದರೂ ಸಾಕು ಜಾತಿಯತೆಯ ಕೆಂಡ ಬೂದಿಯೊಳಗೆ ಪವಡಿಸಿರುವುದು ಖಾತ್ರಿಯಾಗುತ್ತದೆ. ಜಾತಿ ಹೊಸ ಸ್ವರೂಪದಲ್ಲಿದೆ. ಕಾರ್ಪೊರೇಟ್ ಸಂಸ್ಥೆಗಳಂತಹ ಸಂಘಟಿತ ವಲಯಗಳಲ್ಲಿ ಅದು ಬೇರೂರಿದೆ. ರಾಜಕಾರಣಕ್ಕೂ ಜಾತಿಗೂ ಬಿಡದ ನಂಟು. ಇದರೊಟ್ಟಿಗೆ ಜಾತಿ ವಿನಾಶದ ಮಾತುಗಳು ಕೂಡ ಸಮಾಜದ ವಲಯದಲ್ಲಿ ಆಗಾಗ ಕೇಳಿಬರುತ್ತವೆ. ಜಾತಿ ವ್ಯವಸ್ಥೆಗೆ ಮದ್ದು ಅದನ್ನು ಬದಲಿಸುವುದಲ್ಲ ಬದಲಿಗೆ ಆಮೂಲಾಗ್ರವಾಗಿ ಅದನ್ನು ಕಿತ್ತುಹಾಕುವುದು.
ಜಾತಿ ವಿನಾಶವನ್ನು ಹಂಬಲಿಸುವ ಅನೇಕರು ಸಮಾಜದಲ್ಲಿ ಇದ್ದಾರೆ. ಆದರೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದು ಹೇಗೆ ಎಂಬ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಕೃತಿ ಕೆಲಸ ಮಾಡುತ್ತದೆ ಕಂಚ ಐಲಯ್ಯ ಅವರು ಬರೆದ ’ಜಾತಿ ವಿನಾಶ’ ಕೃತಿ. ಮಾರ್ಕ್ಸ್‌ವಾದಿ ದೃಷ್ಟಿಕೋನದಲ್ಲಿ ಐಲಯ್ಯ ಜಾತಿ ವಿನಾಶದ ಎಳೆಗಳನ್ನು ಬಿಚ್ಚಿಡುತ್ತಾರೆ. ಬಿ. ಸುಜ್ಞಾನಮೂರ್ತಿ ಇದನ್ನು ಕನ್ನಡಕ್ಕೆ ತಂದಿದ್ದಾರೆ.
©2024 Book Brahma Private Limited.