ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪರಿಸರ, ಆಹಾರ ಭದ್ರತೆ, ಜೈವಿಕ ತಂತ್ರಜ್ಞಾನಗಳ ಬಗ್ಗೆ ಅಪಾರ ಅಧ್ಯಯನ ಮಾಡಿರುವ ಅಂತಾರಾಷ್ಟ್ರೀಯ ಮಟ್ಟದ ಚಿಂತಕ ದೇವಿಂದರ್ ಶರ್ಮಾ ಅವರ ಲೇಖನಗಳ ಸಂಗ್ರಹವೇ ಈ ಕೃತಿ. ನಾಗೇಶ್ ಕೆ. ಎನ್. ಅವರು ಇದನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿರುವ ಎಲ್ಲ ಲೇಖನಗಳೂ ಕೃಷಿ ಕ್ಷೇತ್ರ ಅವಸಾನದತ್ತ ಸಾಗುತ್ತಿರುವ ಹಿಂದಿನ ರಾಜಕೀಯ ಮತ್ತು ಸಾಮಾಜಿಕ ಕಾರಣಗಳನ್ನು ವಿಶ್ಲೇಷಿಸುತ್ತದೆ. ನಮ್ಮ ನೆಲ, ಬದುಕು ದುರಂತದ ಅಂಚಿಗೆ ದಾಪುಗಾಲಿಕ್ಕುತ್ತಿದೆ ಎನ್ನುವ ಸತ್ಯವನ್ನು ನಮಗೆ ಮನವರಿಕೆ ಮಾಡಿ ಕೊಡುವಲ್ಲಿ ಕೃತಿ ಯಶಸ್ವಿಯಾಗುತ್ತದೆ. ಇಲ್ಲಿ ದೇವೇಂದ್ರ ಶರ್ಮಾ ಅವರ 20ಕ್ಕೂ ಹೆಚ್ಚು ಲೇಖನಗಳಿವೆ. ಭಾರತದ ಕೃಷಿ ಯಾಕೆ ಲಾಭದಾಯಕವಾಗಿಲ್ಲ, ದೇಶದ ಪ್ರಗತಿ ಹೇಗೆ ಕೃಷಿಯ ಜೊತೆಗಿನ ಕೊಂಡಿಯನ್ನು ಕಳಚಿಕೊಳ್ಳುತ್ತಾ ಅಧಃಪತನದಡೆಗೆ ಸಾಗುತ್ತಿದೆ, ರಾಜಕಾರಣಿಗಳ ಕುಲಾಂತರಿ ಜಪಗಳಿಂದ ನಮ್ಮ ನೆಲೆ ಮತ್ತು ಬದುಕು ಹೇಗೆ ಪರಾವಲಂಬಿಯಾಗುತ್ತಿದೆ. ಸೆಲೆಬ್ರಿಟಿಗಳ ಹಿಪಾಕ್ರಸಿ, ಮಾರುಕಟ್ಟೆಯ ಬಿಕ್ಕಟ್ಟು, ನಗರ ಗ್ರಾಮೀಣ ಭಾರತದ ಸಂಘರ್ಷಗಳನ್ನು ಲೇಖನಗಳು ವಿವರಿಸುತ್ತದೆ. ಇಲ್ಲಿರುವ ಪ್ರತೀ ಲೇಖನಗಳೂ ಈ ನೆಲದ ಸತ್ಯವನ್ನು ತೆರೆದಿಡುವ ಶಕ್ತಿಯನ್ನು ಹೊಂದಿವೆ.
©2024 Book Brahma Private Limited.