ಎಂ.ಸಿ. ರಾಜಾ ಅವರು ದಲಿತ ದಮನಿತರ ಬಗ್ಗೆ ಬರೆದಿರುವ ಕೃತಿಯನ್ನು ನಾ. ದಿವಾಕರ ಅವರು ಕನ್ನಡೀಕರಿಸಿದ್ದಾರೆ. ಭಾರತದ ಜಾತಿ ವ್ಯವಸ್ಥೆ ಎಷ್ಟೇ ಕ್ರೌರ್ಯ, ತಾರತಮ್ಯ ಪ್ರದರ್ಶಿಸಿದರೂ ಈ ದೇಶದ ನಿವಾಸಿಗಳಾದ ಆದಿ ದ್ರಾವಿಡ ಜನಾಂಗದ ಸಹಕಾರ ಇಲ್ಲದೆ ಸಮಾಜ ಚಲನೆಯೇ ಇಲ್ಲವಾಗುತ್ತದೆ ಎಂಬ ವಾಸ್ತವವನ್ನು ಈ ಕೃತಿಯಲ್ಲಿ ಲೇಖಕರು ನಿರೂಪಿಸಿದ್ದಾರೆ. ಆಧುನಿಕ ಭಾರತದಲ್ಲೂ ದಲಿತ ಸಮುದಾಯಗಳು ನಿರ್ವಹಿಸುತ್ತಿರುವ ದೈಹಿಕ ಶ್ರಮವು ಸಮಾಜದ ಸುಸ್ಥಿತಿಗೆ ಕಾರಣ. ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಸ್ವಾತಂತ್ಯ್ರ, ಸಮಾನತೆಯ ನೆಲೆಗಳು ಸಮುದಾಯಗಳ ಮುನ್ನಡೆಗೆ ಹೇಗೆ ನೆರವಾದವು. ದಲಿತ, ದಮನಿತ ಸಮುದಾಯಗಳ ಸಬಲೀಕರಣ ಮತ್ತು ದಲಿತ ಸಮುದಾಯಗಳ ವಿಮೋಚನೆಯ ಮಾರ್ಗಗಗಳನ್ನು ವಸ್ತುನಿಷ್ಠವಾಗಿ ಲೇಖಕರು ಪರಾಮರ್ಶಿಸಲು ಈ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE